ಜಿಲ್ಲೆ

ಇಂದು ಕಲ್ಯಾಣ ಕರ್ನಾಟಕ ಉತ್ಸವದ ಅಮೃತ ಮಹೋತ್ಸವಕ್ಕೆ ಕಲಬುರಗಿ ಸಜ್ಜು : ಸಿಎಂ ಸಿದ್ದರಾಮಯ್ಯ ಆಗಮನಕ್ಕೆ ಕ್ಷಣ ಗಣನೆ

ಬಾಬುರಾವ ಯಡ್ರಾಮಿ

ಸಿದ್ಧತೆ ಪರಿಶೀಲಿಸಿದ ಪ್ರಿಯಾಂಕ್ ಅಜಯಸಿಂಗ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಉತ್ಸವ (ಹೈಕ ವಿಮೋಚನಾ ದಿನಾಚರಣೆ) ಅಮೃತ ಮಹೋತ್ಸವಕ್ಕೆ ತೊಗರಿ ನಾಡು ಕಲಬುರಗಿ ಸಜ್ಜುಗೊಂಡಿದೆ. ಭಾನುವಾರ ಬೆಳಗ್ಗೆ ೮-೩೦ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಅದಕ್ಕಾಗಿ ಅಗತ್ಯವಿರುವ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.ನಾಡದೊರೆ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ.


ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ಎಲ್ಲಡೆ ವಿದ್ಯುತ್ ದೀಪಗಳನ್ನು ಹಾಕಲಾಗಿದ್ದು ಜಗಮಗಿಸುತ್ತಿವೆ. ಪಟೇಲ್ ಪ್ರತಿಮೆ ಆವರಣವನ್ನು ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ನಗರ ಎಲ್ಲಡೆ ಸ್ವಾಗತ ಕಮಾನುಗಳನ್ನು ಹಾಕಿ ಸುಂದರಗೊಳಿಸಲಾಗಿದೆ.


ನಗರದ ಪೊಲೀಸ್ ಮೈದಾನದಲ್ಲಿ ಕಕ ಉತ್ಸವ  ಸಮಾರಂಭ ಜರುಗಲಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನುz್ದೆÃಶಿಸಿ ಮಾತನಾಡುವರು. ಅಲ್ಲದೆ ಈ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ನೆರವೇರಿಸುವರು. ಹಾಸ್ಟೇಲ್ ಕಟ್ಟಡಗಳು, ಸೇತುವೆಗಳನ್ನು ಸೇರಿದಂತೆ ಹಲವು ಕಟ್ಟಡಗಳನ್ನು ಇಲ್ಲಿಂದಲೇ ಉದ್ಘಾಟಿಸಿ ಲೋಕಾರ್ಪಣೆ ಮಾಡುವರು.


ಕಾರ್ಯಕ್ರಮದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್ ಅವರು  ಭೇಟಿ ನೀಡಿ ಪರಿಶೀಲಿಸಿದರು. ಹಲವು ಸಲಹೆಗಳನ್ನು ನೀಡಿದರು. ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಡೆ ಖಾಕಿ ಪಡೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಹೈಅಲರ್ಟ್ ಆಗಿದ್ದಾರೆ.
....
ಕಲಬುರಗಿಯಲ್ಲಿ ಭಾನುವಾರ ಜರುಗಲಿರುವ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಈ ವರ್ಷವಿಡಿ ಅಮೃತ ಮಹೋತ್ಸವ ನಡೆಯಲಿದೆ. ಏಳು ಜಿಲ್ಲೆಗಳಲ್ಲಿ ಒಂದೊAದು ಘೋಷಣೆಯೊಂದಿಗೆ  ಎರಡು ತಿಂಗಳಿಗೊAದು ಕಡೆ ಕಾರ್ಯಕ್ರಮ ನಡೆಯಲಿದ್ದು ಸಿಎಂ ಎಲ್ಲಡೆ ಭಾಗಿಯಾಗಲಿದ್ದಾರೆ.
| ಡಾ.ಅಜಯಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

---
ಕಲ್ಯಾಣ ಕರ್ನಾಟಕ ಉತ್ಸವಕ್ಕೆ  ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಅಗತ್ಯ ಬಂದೋಬಸ್ತ್ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮಗಳ ಸ್ಥಳಗಳನ್ನು ಪರಿಶೀಲನೆ ನಡೆಸಿz್ದÉÃನೆ. ಮಾದರಿಯಾಗಿ ಕಾರ್ಯಕ್ರಮ ನಡೆಸಲಾಗುವುದು.
| ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ