ಬಾದಾಮಿ ನಗರದ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಕಿತ್ತೂರ ಚನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಆಚರಿಸಲಾಯಿತು. ತಹಸೀಲ್ದಾರ್ ಮಧುರಾಜ, ಪಿಎಸ್‌ಐ ವಿಠ್ಠಲ ನಾಯಕ, ಮುಖಂಡರಾದ ಡಾ.ಎನ್.ಡಿ. ದೊಡ್ಡನಿಂಗಪ್ಪನ್ನವರ, ರಮೇಶ ಹಾದಿಮನಿ, ಅಶೋಕ ಗಂಗಾಲ ಇತರರಿದ್ದರು. 
ಜಿಲ್ಲೆ

ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಬಾದಾಮಿ: ನಗರದ ಹೊರವಲಯದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ವೀರರಾಣಿ ಕಿತ್ತೂರ ರಾಣಿ ಚನ್ನಮ್ಮನ ವಿಜಯೋತ್ಸವ ಮತ್ತು ಜಯಂತಿ ಆಚರಿಸಲಾಯಿತು.

ತಾಲೂಕು ಆಡಳಿತ ಮತ್ತು ಪಂಚಮಸಾಲಿ ಸಮಾಜದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ನಂತರ ಹೊಸದಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಪಕ್ಕದ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು.

ತಹಸೀಲ್ದಾರ್ ಮಧುರಾಜ, ಪಿಎಸ್‌ಐ ವಿಠ್ಠಲ ನಾಯಕ, ಮುಖಂಡರಾದ ಡಾ.ಎನ್.ಡಿ. ದೊಡ್ಡನಿಂಗಪ್ಪನ್ನವರ, ರಮೇಶ ಹಾದಿಮನಿ, ಅಶೋಕ ಗಂಗಾಲ, ನಿಂಗಪ್ಪ ಹೊಸಮನಿ, ಮಹೇಶ ಪಾಟೀಲ, ಶರಣಪ್ಪ ಮಾವಿನಮರದ, ಬಸವರಾಜ ದೂಳಪ್ಪನವರ, ಮಳಿಶಾಂತ ಬೀಳೆಬಾಳ, ಬಸವರಾಜ ಉಳ್ಳಾಗಡ್ಡಿ, ಸಂಗಮೇಶ ಚೌದ್ರಿ, ವೀರಣ್ಣ ಸಾತನ್ನವರ, ಪುರಸಭಾ ಸದಸ್ಯ ಅಶೋಕ ಯಲಿಗಾರ, ಗುಂಡಪ್ಪ ತೀರ್ಥಪ್ಪನವರ ಇತರರಿದ್ದರು.