ಜಿಲ್ಲೆ

ಕಿತ್ತೂರು ರಾಣಿ ಚನ್ನಮ್ಮ: 19ನೇ ಶತಮಾನದ ಪೌರಾಣಿಕ ರಾಣಿ' ವಿಚಾರ ಸಂಕಿರಣ

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾಧನೆಗೆ ಗುರಿ ಅತಿ ಮುಖ್ಯ. ಗುರಿ ಸಾಧನೆಯ ಸಮಯದಲ್ಲಿ ಸಮಸ್ಯೆ ಸಹಜ. ಗುರಿ ಅಚಲವಾದರೆ ಅಸಾಧಾರಣ ಸಾಧನೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಅಂಜುಮನ್ ಕಲಾ ವಿಜ್ಞಾನ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ: 19ನೇ ಶತಮಾನದ ಪೌರಾಣಿಕ ರಾಣಿ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತಿçÃಯರಿಗೆ ಮುಕ್ತ ಅವಕಾಶ ನೀಡಿದಾಗ ಪ್ರತಿಭೆ ಹೊರಬರಲು ಸಾಧ್ಯ. ಅದೇರೀತಿ ಮಾನಸಿಕ ಚಂಚಲತೆಯಿAದ ಮುಕ್ತರಾಗಬೇಕು. ಮಹಿಳೆ ಸ್ವಯಂ ಅರಿವು ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಜನಾಬ ಬಶೀರ್‌ಅಹಮದ್ ಜಾಗೀರದಾರ ಮಾತನಾಡಿ, ರಾಣಿ ಚೆನ್ನಮ್ಮ ಸಾಧನೆ ಅಜರಾಮರ ಎಂದರು.

ಸAಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಎಸ್.ಎ. ಸರ್ಗಿರೋ, ಖಜಾಂಚಿ ಮಹಮ್ಮದ್‌ರಫಿಕ್ ಶಿರಹಟ್ಟಿ, ಪ್ರಾಚಾರ್ಯ ಡಾ. ಎನ್.ಎಂ. ಮಕಾಂದಾರ ಹಾಗೂ ಐಕ್ಯೂಎಸಿ ಸಂಯೋಜಕ ಡಾ. ಎನ್.ಬಿ. ನಲತವಾಡ, ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಯಲಿಗಾರ ವೇದಿಕೆಯಲ್ಲಿದ್ದರು.

ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಜನಾಬ್ ಖಐರುದ್ದೀನ್ ಶೇಕ್, ಯಾಸಿನ್ ಹಾವೇರಿಪೇಟ, ನಜೀರ್ ಬಲಬಟ್ಟಿ ಇತರರಿದ್ದರು.

ರಾಣಿ ಚೆನ್ನಮ್ಮ ಪೌರಾಣಿಕ ಕಿರುನಾಟಕ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಭಗವದ್ಗೀತೆ ಶ್ಲೋಕ ಮತ್ತು ಕುರಾನ್ ಪಠಿಸಿದರು. ಡಾ. ಆಸ್ಮಾನಾಜ್ ಬಳ್ಳಾರಿ ಪರಿಚಯಿಸಿದರು. ಡಾ. ಸೈಯದ್ ತಾಜುನ್ನಿಸಾ ನಿರೂಪಿಸಿದರು. ಪ್ರೊ. ಆಸ್ಮಾ ನದಾಫ ವಂದಿಸಿದರು.