ಜಿಲ್ಲೆ

ಕಿತ್ತೂರು ಉತ್ಸವಾಚರಣೆಗೆ ವಿರೋಧ ಸಲ್ಲ

ಚನ್ನಮ್ಮನ ಕಿತ್ತೂರು: ಕುಲವಳ್ಳಿ ಭಾಗದಲ್ಲಿ ಭೂಮಿಗಾಗಿ ಇನಾಮದಾರ ಕುಟುಂಬ ಹಾಗೂ ರೈತರ ನಡುವಿನ ಹೋರಾಟ ಮುಂಬರುವ ಚನ್ನಮ್ಮನ ಕಿತ್ತೂರು ಉತ್ಸವ ಆಚರಣೆಗೆ ಅಡಚಣೆಯಾಗದ ರೀತಿಯಲ್ಲಿ ರೆತ ಮುಖಂಡರು ಹೋರಾಟ ಮಾಡಬೇಕು ಎಂದು ಕಿತ್ತೂರು ಕರ್ನಾಟಕ ರಣಾ ವೇದಿಕೆ ಮುಖಂಡ ಬಸವರಾಜ ಚಿಕ್ಕನಗೌಡರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ಕಿತ್ತೂರು ಉತ್ಸವ ವಿಜಯ ಜ್ಯೋತಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದಾಗ ರೆತ ಮುಖಂಡ ಚೂನಪ್ಪ ಪೂಜಾರಿ ಪ್ರತಿಭಟನೆ ನಡೆಸಿ ಕುಲವಳ್ಳಿ ರೆತರಿಗೆ ಆಗಿರುವ ಅನ್ಯಾಯ ಪರಿಹರಿಸಿದ ನಂತರವಷ್ಟೇ ಕಿತ್ತೂರು ಉತ್ಸವ ಆಚರಿಸಲು ಅವಕಾಶ ನೀಡುತ್ತೇವೆ ಎಂದಿದ್ದಾರೆ. ಆದರೆ, ಕುಲವಳ್ಳಿ ರೆತರ ಹೋರಾಟ ಖಾಸಗಿ ವಿಷಯವಾಗಿದ್ದು, ಅವರು ಪ್ರತಿಭಟನೆ ನಡೆಸಿ ನ್ಯಾಯ ಕಂಡುಕೊಳ್ಳಲಿ. ಅದಕ್ಕೆ ನಮ್ಮ ತಕರಾರಿಲ್ಲ. ಅವರು ಇದೇ ಕಾರಣಕ್ಕೆ ಕಿತ್ತೂರು ಉತ್ಸವದ ಆಚರಣೆಗೆ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ. ಉತ್ಸವಕ್ಕೆ ಅವಕಾಶ ನೀಡುವುದಿಲ್ಲ ಎಂಬ ಹೇಳಿಕೆ ಖಂಡಿಸುತ್ತೇವೆ ಎಂದರು.