ಜಿಲ್ಲೆ

ರಸ್ತೆ ನಿರ್ಮಾಣದಿಂದ ಹಳ್ಳಿಗಳ ಅಭಿವೃದ್ಧಿ

ಬೈಲಹೊಂಗಲ: ಸಮರ್ಪಕ ರಸ್ತೆ ನಿರ್ಮಿಸಿದರೆ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ.

ಸಮೀಪದ ಸಂಪಗಾಂವ-ಕುರಗುಂದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಸ್ತೆಗೆ ಜಿಪಂ ಇಂಜಿನಿಯರಿಂಗ್ ಇಲಾಖೆಯಿಂದ ಸುಮಾರು 78 ಲಕ್ಷ ರೂ.ಮಂಜೂರಾಗಿದ್ದು, ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು.

ಅಧಿಕಾರಿಗಳು ರಸ್ತೆ ನಿರ್ಮಾಣ ಕಾಮಗಾರಿ ಕುರಿತು ನಿಗಾ ವಹಿಸಬೇಕು ಎಂದರು. ಶಿವಯೋಗೆಪ್ಪ ಸಿದ್ನಾಳ, ಈರಣ್ಣ ಸಿದ್ನಾಳ, ಬಸನಗೌಡ ಜುಟ್ಟಣ್ಣವರ, ಬಸವರಾಜ ಪುಟ್ಟಿ, ಬಸವರಾಜ ಸಂಬರಗಿ, ಅನಿಲ ನೇಸರಗಿ, ಶಿವಪುತ್ರೆಪ್ಪ ಜುಟ್ಟನವರ, ಎಂ.ಎನ್. ಪಾಟೀಲ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.