ಜಿಲ್ಲೆ

ಕಿತ್ತೂರಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣ

ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ 100 ಹಾಸಿಗೆ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರತಿದ್ದು, ಇದು ಶಾಸಕ ಬಾಬಾಸಾಹೇಬ ಪಾಟೀಲ ಹೋರಾಟಕ್ಕೆ ಸಂದ ಜಯ ಎಂದು ಪಪಂ ಅಧ್ಯ ಜೆಸಿದ್ದರಾಮ ಮಾರಿಹಾಳ ಹೇಳಿದರು.

ಪಟ್ಟಣದ ಸೋಮವಾರ ಪೇಟೆಯ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅರಳಿಕಟ್ಟೆ ಹಾಗೂ ಹೆದ್ದಾರಿ ಪಕ್ಕದ ಚನ್ನಮ್ಮ ವತ್ತದ ಬಳಿ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಮಾತನಾಡಿದ ಅವರು, ಪಟ್ಟಣಕ್ಕೆ ಈ ಮೊದಲು ೂಷಣೆಯಾಗಿದ್ದ 50 ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಪಟ್ಟಣದ ಆಡಳಿತ ಸೌಧದ ಬಳಿಯ ಮೂರು ಎಕರೆ ಜಮೀನಿನಲ್ಲಿ 33 ಕೋಟಿ ರೂ.ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯ ಎಂ.ಎ್​.ಜಕಾತಿ ಮಾತನಾಡಿ, ಹಿಂದಿನ ಸರ್ಕಾರ ಪಟ್ಟಣದ ಹೊರಗೆ ಆಸ್ಪತ್ರೆ ನಿರ್ಮಿಸಲು ಮುಂದಾಗಿತ್ತು.

ಆಗ ಬಾಬಾಸಾಹೇಬ ಪಾಟೀಲ ನೇತೃತ್ವದಲ್ಲಿ ಜನರ ಹೋರಾಟದಿಂದ ನಿರ್ಮಾಣ ಕಾರ್ಯ ಸ್ಥಗಿತವಾಗಿತ್ತು. ಆ ಹೋರಾಟ ಈಗ ಫಲಿಸಿದೆ ಎಂದರು.

ಮುಖಂಡರಾದ ಆಶ್ಪಾಕ್​ ಹವಾಲ್ದಾರ, ಬಸವರಾಜ ಸಂಗೊಳ್ಳಿ, ಅಪ್ಪಾಸಾಹೇಬ ಶಿಲೇದಾರ, ಸುನೀಲ ಘೀವಾರಿ, ಕಷ್ಣಾ ಬಾಳೇಕುಂದ್ರಗಿ, ಶಂಕರ ಬಡಿಗೇರ, ಮುಸ್ತಾಕ ಸುತಗಟ್ಟಿ, ಪ್ರವಿಣ ಜಕ್ಕನಗೌಡರ, ಕುತುಬು ನದಿಮುಲ್ಲಾ, ವಿಷ್ಣು ಕಲಾಲ್​, ಸಂಜೀವ ಲೋಕಾಪುರ, ಕಿರಣ ವಾಳದ, ಅಜಿತ ಚವಾಣ, ವಿಜಯ ವಳಸಂಗ, ಮಂಜುನಾಥ ಗಂಗಪ್ಪನವರ ಇತರರು ಇದ್ದರು.