ಜಿಲ್ಲೆ

ಕಿತ್ತೂರು ಪ್ರಗತಿಗೆ ವಿಶೇಷ ಅನುದಾನ ನೀಡಲಿ

ಚನ್ನಮ್ಮನ ಕಿತ್ತೂರು: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡದೇ ರ್ನಿಲಕ್ಷ$್ಯ ತೋರಿವೆ. ಕೂಡಲೇ ಪ್ರಾಧಿಕಾರಕ್ಕೆ ವಿಶೇಷ ಅನುದಾನ ಮಂಜೂರು ಮಾಡಿ ಚನ್ನಮ್ಮಾಜಿ ಐಕ್ಯಸ್ಥಳ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ ನೇತೃತ್ವದಲ್ಲಿ ಎಸಿ ಪ್ರಭಾವತಿ ಪಕ್ಕಿರಪುರ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಮಂಗಳವಾರ ಸಲ್ಲಿಸಲಾಯಿತು.

ದೇಶದ ನಾಡಿನ ಸ್ವಾತಂತ್ರ$್ಯ ಹಾಗೂ ಸ್ವಾಭಿಮಾನಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮಾಜಿ ಹೋರಾಟ ಸ್ಮರಣೀಯ. ಹೀಗಾಗಿ, ಚನ್ನಮ್ಮನ ಸಂಸ್ಥಾನದ ವೀರ ಸೈನಿಕರ ಸ್ಮರಣೆ, ಕೋಟೆ ಸಂರಣೆ, ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ಚನ್ನಮ್ಮನ ಕಿತ್ತೂರನ್ನು

ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.

ದೇವರ ಶೀಗಿಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ನಿಚ್ಚಣಕಿಯ ಪಂಚಾರಿ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಹಜರತ್​ ತನ್ವೀರಸಾಬ್​, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಪಪಂ ಅಧ್ಯ ಜೈಸಿದ್ದರಾಮ ಮಾರಿಹಾಳ, ಬಿಜೆಪಿ ತಾಲೂಕಾಧ್ಯ ಶ್ರೀಕರ ಕುಲಕರ್ಣಿ, ಪಪಂ ಮಾಜಿ ಅಧ್ಯ ಹನುಮಂತ ಲಂಗೋಟಿ, ಮುಖಂಡರಾದ ಜಗದೀಶ ವಸ್ತ್ರದ, ವಕೀಲ ಶಿವಾನಂದ ಬೋಗೂರ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಸಂಗನಗೌಡ ಪಾಟೀಲ, ಮುದುಕಪ್ಪ ಮರಡಿ, ಬಸವರಾಜ ಸಂಗೊಳ್ಳಿ, ಮಲ್ಲಣ್ಣ ಸಾಣಿಕೊಪ್ಪ, ಕುಮಾರ ಬಿಕ್ಕಣ್ಣವರ ಇತರರಿದ್ದರು.