ಬೆಳಗಾವಿ:ಸವದತ್ತಿ ತಾಲೂಕಿನ ಕಿಟದಾಳ ಗ್ರಾಮದ ಸರ್ಕಾರಿ ಗಾಯರಾಣ ಜಾಗದಲ್ಲಿ ಸೋಲಾರ್ ಘಟಕ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಮನವಿ ಸಲ್ಲಿಸಿದರು.
ಕಿಟದಾಳ ಗ್ರಾಮದಲ್ಲಿ ಒಟ್ಟು 46 ಎಕರೆ ಸರ್ಕಾರಿ ಗಾಯರಾಣ ಭೂಮಿಯಿದೆ. ಅಲ್ಲಿ ಮೊದಲಿನಿಂದಲೂ ದನಕರು, ಕುರಿ, ಮೇಕೆ ಮೇಯಿಸಿಕೊಡು ಬರುತ್ತಿದ್ದೇವೆ. ಗ್ರಾಮದಲ್ಲಿ ಗುಡ್ಡುಗಾಡು ಪ್ರದೇಶವೂ ಇಲ್ಲ. ಅಲ್ಲದೆ ಈಗಾಗಲೇ ವಿವಿಧ ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 17 ಎಕರೆ ಬಳಸಲಾಗಿದೆ. ಇನ್ನುಳಿದ 29 ಎಕರೆ ಪ್ರದೇಶದಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಮುಂದಾಗಿರುವುದು ಖಂಡನೀಯ. ಗ್ರಾಮಸ್ಥರ ಹಿತದೃಷ್ಟಿಯಿಂದ ಸೋಲಾರ್ ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ಸರ್ಕಾರಿ ಗಾಯರಾಣ ಜಾಗ ಯಾವುದೇ ಸಂಸ್ಥೆಗೆ ಪರಭಾರೆ ಮಾಡದಂತೆ ಗ್ರಾಮಸ್ಥರು ಒತ್ತಾಯಿಸಿದರು. ಮುಖಂಡರಾದ ಸುರೇಶ ಬುರ್ಜಿ, ಭೀಮಪ್ಪ ಚಿಗರಿ, ಶಿವಾಜಿ ನಲವಡೆ, ಶೇಖರ ಗೋಕಾವಿ, ಪಡೆಪ್ಪ ಬಂಡ್ರೋಳಿ ಇತರರಿದ್ದರು.
6ಆನಂದ1: