ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ಗದಗ ನಗರ ಮಂಡಲ ರೈತ ಮೋರ್ಚಾ ವತಿಯಿಂದ ಗುರುವಾರ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ರೈತನಿಗೆ ಸಿಗಬೇಕಾದ ಹಲವು ಯೋಜನೆಗಳು ಒಂದೇ ಕೇಂದ್ರದಲ್ಲಿ ಸಿಗುವಂತ ಮಹತ್ವದ ಯೋಜನೆ ಇದಾಗಿದೆ. ಸ್ವಾತಂತ್ರ್ಯ ಭಾರತದ 75 ವರ್ಷದಲ್ಲಿ 50 ವರ್ಷ ಕಾಂಗ್ರೆಸ್ ಪ ಆಡಳಿತ ನಡೆಸಿದರೂ ಕೂಡ ರೈತರಿಗೆ ಅನುಕೂಲ ಆಗುವ ನಿಟ್ಟಿನಿಲ್ಲಿ ಕಾಂಗ್ರೆಸ್ ಯಾವುದೇ ಒಂದು ಯೋಜನೆ ಜಾರಿ ತರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ಅನುಕೂಲವಾಗುವಂತ ಹಲವಾರು ಯೋಜನೆಗಳನ್ನು ನೀಡಿದ್ದಾರೆ ಎಂದರು.
ಎಂ. ಎಸ್. ಕರೀಗೌಡ್ರ ಮಾತನಾಡಿ, ಯೂರಿಯಾ ಗೊಬ್ಬರಕ್ಕೆ ಕೇಂದ್ರ ಸರ್ಕಾರ 2194 ರೂ. ಸಬ್ಸಿಡಿ ನೀಡುತ್ತಿದ್ದು, ಕೇವಲ 266 ರೂ. ಗಳಿಗೆ ರೈತ ಯೂರಿಯಾ ಗೊಬ್ಬರ ಖರೀದಿಸಬಹುದು. ಜಿಲ್ಲೆಯಲ್ಲಿ ಒಟ್ಟು 72 ಕಿಸಾನ್ ಸಮೃದ್ಧಿ ಕೇಂದ್ರಗಳು ಲೋಕಾರ್ಪಣೆಗೊಂಡಿವೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಂಕರ ಕರಿಬಿಷ್ಠಿ, ರಾಜಣ್ಣ ಕುಲಕಣಿರ್, ಕಾಂತೀಲಾಲ ಬನ್ಸಾಲಿ, ಅನಿಲ ಅಬ್ಬಿಗೇರಿ, ಬೂದಪ್ಪ ಹಳ್ಳಿ, ಭೀಮಸಿಂಗ್ ರಾಠೋಡ, ಪ್ರಭು ಕಲ್ಬಂಡಿ, ನಿಂಗಪ್ಪ ಹಂಚಿನಾಳ, ಮಲ್ಲೇಶ ಕರಿಬಿಷ್ಠಿ, ಗೂಳಪ್ಪ ಹಳ್ಳದ, ರಾಚಪ್ಪ ಅಂತರಗೊಂಡ, ಮಲ್ಲಿಕಾರ್ಜುನ ಹೊಳೆಯಣ್ಣವರ, ಬಸವರಾಜ ಹುಬ್ಬಳ್ಳಿ, ಸುಭಾಸ ಕದಡಿ, ಬಸವರಾಜ ಹಡಗಲಿ, ಸೌರವ್ ದೊಬೆ, ಬಸವರಾಜ ಪೂಜಾರ, ವಿಜಯ ಕುರ್ತಕೋಟಿ ಹಲವರು ಇದ್ದರು.