ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಸಾಂಸ್ಕೃತಿಕ ವೈಭವದ 4ನೇ ದಿನ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯರಿಂದ ಸನಾತನ ನೃತ್ಯಾಂಜಲಿ ಪ್ರದರ್ಶಿತವಾಯಿತು.
ಭರತನಾಟ್ಯ, ಜನಪದ ನೃತ್ಯ ಮತ್ತು ದೇಶಭಕ್ತಿ ಗೀತೆಗಳನ್ನು ಒಳಗೊಂಡು ನೃತ್ಯ ವೈವಿಧ್ಯ ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು. ಸುಮಾರು 2 ತಾಸು ನಡೆದ ಮನಸೂರೆಗೊಂಡಿತು.
ವಿದುಷಿ ಖುಷಿ(ಶಿಫಾಲಿ) ಸುರತ್ಕಲ್, ವಿದುಷಿ ನೇಹಾ, ವಿದುಷಿ ಅಮೃತಾ ವಿ, ವಿದುಷಿ ಕೃಪಾ, ವಿದುಷಿ ವಿಜಿತಾ ಶೆಟ್ಟಿ, ವಿದುಷಿ ಸಿಂಚನ ಕುಲಾಲ್, ಚೈತ್ರಾ, ಮೋಕ್ಷಾ ಆರ್.ಉಳ್ಳಾಲ್, ಶ್ರೀಕರೀ, ರಮ್ಯಾ ತುಂಗ, ಅವನಿ ಗಣೇಶ್, ಕೃತಿ, ಪ್ರಾರ್ಥನಾ ಶೆಟ್ಟಿ, ಮೊನಿಶಾ ಗಟ್ಟಿ, ಸಾನ್ವಿ ಎಂ.ಎಸ್, ಶರಣ್ಯಾ ಮಾಳಿಗೆಮನೆ, ಗಗನಾ, ಜೀವಿತಾ, ಸುಧೀಂದ್ರ ಜೆ.ಶಾಂತಿ ಕಾರ್ಕಳ ಭಾಗವಹಿಸಿದ್ದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕಲಾವಿದರನ್ನು ಗೌರವಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿಯ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ ಉಪಸ್ಥಿತರಿದ್ದರು.ಉಪನ್ಯಾಸಕಿ ಸವಿತಾ ಕೈಲಾಸ್ ನಿರೂಪಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ನಿರ್ವಹಿಸಿದರು.