ಜಿಲ್ಲೆ

ದಕ್ಷಿಣ ಭಾರತ ಮಟ್ಟದ ಮಾನ್ಸೂನ್ ಕ್ರೀಡಾಕೂಟದಲ್ಲಿ ವಿಜಯವಾಣಿ ಸಿಬ್ಬಂದಿ ಕಿರಣ್ ಪೈಗೆ ಪದಕ

Mangaluru - Shravan Kumar Nala

ಮಂಗಳೂರು: ಕೇರಳ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ ದಕ್ಷಿಣ ಭಾರತ ಮಟ್ಟದ ಮಾನ್ಸೂನ್ ಕ್ರೀಡಾಕೂಟದಲ್ಲಿ ಮಂಗಳೂರು ‘ವಿಜಯವಾಣಿ’ ಉದ್ಯೋಗಿ ಕಿರಣ್ ಪೈ ಅವರಿಗೆ 35 ವಯೋಮಿತಿ ವಿಭಾಗ ಹ್ಯಾಮರ್ ನಲ್ಲಿ ಚಿನ್ನ (33.4 ಮೀ ವೈಯಕ್ತಿಕ ಬೆಸ್ಟ್) ಹಾಗೂ ಶಾಟ್‌ಪುಟ್ ಎಸೆತದಲ್ಲಿ ( 9.23 ಮೀ) ಬೆಳ್ಳಿ ಪದಕ ಲಭಿಸಿದೆ.

ದಕ್ಷಿಣ ಭಾರತದ ಕೇರಳ, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡಿನ 250 ಕ್ಕೂ ಹೆಚ್ಚು ವಿವಿಧ ವಯೋಮಿತಿಯ ಅಥ್ಲಿಟ್ಸ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಳೆದ ಎಪ್ರಿಲ್‌ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಇವರು ಹ್ಯಾಮರ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.