ತಿ.ನರಸೀಪುರ ತಾಲೂಕಿನ ಕಿರಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ಅವಿರೋಧವಾಗಿ ಆಯ್ಕೆಗೊಂಡರು. ಬಿ.ಮಂಟೇಲಿಂಗಪ್ಪ, ಸಿ.ನಿಂಗರಾಜು, ಚಂದ್ರಮ್ಮ, ಗಿರೀಶ, ಪರಶಿವ, ವಸಂತ, ಸೋಮಣ್ಣ, ರವಿ ಇತರರು ಇದ್ದರು. 
ಜಿಲ್ಲೆ

ಕಿರಗಸೂರು ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ

ತಿ.ನರಸೀಪುರ: ತಾಲೂಕಿನ ಕಿರಗಸೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಡಣಾಯಕಪುರ ನಾಗರತ್ನಮ್ಮ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಸಿ.ನಿಂಗರಾಜು ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಪ.ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾ ಸಭೆಗೆ 17 ಸದಸ್ಯರಲ್ಲಿ 16 ಸದಸ್ಯರು ಹಾಜರಾಗಿ ಅಧ್ಯಕ್ಷರ ಅವಿರೋಧ ಆಯ್ಕೆಗೆ ಅನುಮೋದನೆ ನೀಡಿದರು. ಭಾಗ್ಯಾ ಅವರು ಗೈರುಹಾಜರಾಗಿದ್ದರು.

ಚುನಾವಣಾಧಿಕಾರಿಯಾಗಿ ಬನ್ನೂರು ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಮಂಜುನಾಥ್ ಕಾರ್ಯನಿರ್ವಹಿಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನೂತನ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಪಡೆದು ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಧ್ಯಕ್ಷೆಯಾಗಲು ಕಾರಣರಾದ ಎಲ್ಲರಿಗೂ ಚಿರಋಣಿಯಾಗಿದ್ದೇನೆ. ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್ ಹಾಗೂ ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ಅವರಿಂದ ಅಭಿವೃದ್ಧಿಗೆ ಹೆಚ್ಚಿನ ನೆರವು ಪಡೆಯುತ್ತೇವೆ ಎಂದು ತಿಳಿಸಿದರು.

ಉಪಾಧ್ಯಕ್ಷೆ ಚಿನ್ನತಾಯಮ್ಮ, ಮಾಜಿ ಅಧ್ಯ ಕ್ಷರಾದ ಚಂದ್ರಮ್ಮ, ಸಿ.ನಿಂಗರಾಜು, ಸದಸ್ಯರಾದ ಮಹದೇವಸ್ವಾಮಿ, ಮಂಗಳಮ್ಮ, ಶಿವರಾಜು, ನಾಗರಾಜು, ಜ್ಯೋತಿ, ಗಿರಿಜಮ್ಮ, ಮಹೇಶ, ರಾಜೇಶ್ವರಿ, ಪಿ.ನಾಗರಾಜು, ಸರೋಜಮ್ಮ, ಆರ್.ಗಿರೀಶ್, ಕಾಮಿನಿ, ಪಿಡಿಒ ಎಸ್.ಜಿ.ಧರಣೇಶ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಣ್ಣ, ಮಾಜಿ ಉಪ ಪ್ರಧಾನ ಡಿ.ಆರ್.ಮೂರ್ತಿ, ಮಾಜಿ ಉಪಾಧ್ಯಕ್ಷ ಆರ್.ಮಹದೇವ, ಮುಖಂಡರಾದ ಡಿ.ಎಲ್.ಮಹದೇವಪ್ಪ, ವಸಂತ, ಬಿ.ಮಂಟೆಲಿಂಗಪ್ಪ, ಶಿವರಾಜು, ಬಿಳಿಗೆರೆಹುಂಡಿ ಡೇರಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಏಳುಮಲೈ ಮಂಜು, ಮುಖಂಡರಾದ ಉಕ್ಕಲಗೆರೆ ರಾಜು, ಗಾಂಧಿ, ಚೆಲ್ನಾಯ್ಕ, ಶಿವರಾಜು, ಪುಟ್ಟಯ್ಯ, ಮರಿಸಿದ್ದಯ್ಯ, ಸಚಿನ್, ಮಹದೇವ, ಕುಮಾರ, ರಜಿನಿ ಇದ್ದರು.