ಜಿಲ್ಲೆ

ಕೆಐಒಸಿಎಲ್ನಿಂದ ಸ್ವಚ್ಛತಾ ಅಭಿಯಾನ

Mangaluru - Hariprasad Rai


ಮಂಗಳೂರು : ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಗರದ ಕೆಐಒಸಿಎಲ್ ವತಿಯಿಂದ ಕೂಳೂರು ಸೇತುವೆಯ ಸುತ್ತಮುತ್ತಲಿನ ಪ್ರದೇಶಗಳು, ಸೇತುವೆ ಬಳಿಯ ಎನ್‌ಎಂಪಿಟಿ ಮಂಗಳಾ ವೃತ್ತ, ತಣ್ಣೀರಭಾವಿ ರಸ್ತೆಯ ಪ್ರವೇಶ ದ್ವಾರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ’ಸ್ವಚ್ಛತಾ ಕಾರ್ಯ ನಡೆಯಿತು. ಕೆಐಒಸಿಎಲ್ ಅಧಿಕಾರಿಗಳು ಮತ್ತು ನೌಕರರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ವೀಕ್ಷಣೆ ಮತ್ತು ಚಲನೆಗೆ ಅಡ್ಡಿಯಾಗಿದ್ದ ದಟ್ಟವಾದ ಪೊದೆಗಳನ್ನು ತೆರವುಗೊಳಿಸಲಾಯಿತು. ಸೇತುವೆ ಮತ್ತು ನೀರಿನ ಪೈಪ್‌ಲೈನ್ ಉದ್ದಕ್ಕೂ ಸಂಗ್ರಹವಾದ ಹೂಳು ಮತ್ತು ಕಸವನ್ನು ತೆಗೆದುಹಾಕಲಾಯಿತು.