ಜಿಲ್ಲೆ

ಕೆಐಒಸಿಎಲ್ ಸಿಎಸ್‌ಆರ್ ನಿಧಿಯಿಂದ 2 ಕೋಟಿ ರೂ. ನೆರವು

reportermng

ಮಂಗಳೂರು : ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್) ಸಿಎಸ್‌ಆರ್ ನಿಧಿಯಿಂದ ದಕ್ಷಿಣ ವಿವಿಧ ಸಂಸ್ಥೆಗಳು ಹಾಗೂ ಇಲಾಖೆಗಳಿಗೆ ಒಟ್ಟು 2 ಕೋಟಿ ರೂ.ಗಳ ಮೊತ್ತದ ಚೆಕ್ ವಿತರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ಘಟಕ, ಪುತ್ತೂರು ಮಣಿಕ್ಕರ ಶಾಲೆಯ ಎರಡು ಕೊಠಡಿ ನಿರ್ಮಾಣ, ಕಾವೂರು ಪಿಯು ಕಾಲೇಜಿನ ಎರಡು ಕೊಠಡಿ ನಿರ್ಮಾಣ, ಮಕ್ಕಳ ಸಹಾಯವಾಣಿ ಘಟಕಕ್ಕೆ ವಾಹನ ಖರೀದಿ, ವೆನ್ಲಾಕ್‌ಆಸ್ಪತ್ರೆ ಕಟ್ಟಡ ದುರಸ್ತಿ, ಕುತ್ತಾರ್‌ನ ಮಂಗಳಾ ಸೇವಾ ಸಮಿತಿ, ಬಂಟ್ವಾಳ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಎಕ್ಸರೇ ಯಂತ್ರ ಖರೀದಿ, ಪೊಲೀಸ್ ಕ್ವಾರ್ಟರ್ಸ್ ಕೌನ್ಸೆಲಿಂಗ್ ಹಾಲ್ ದುರಸ್ತಿ, ಭಾರತಿ ಗೋಶಾಲೆ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳಿಗೆ ಒಟ್ಟು 2 ಕೋಟಿ ರೂ. ಮೊತ್ತದ ಚೆಕ್ ಗುರುವಾರ ನೀಡಲಾಯಿತು.
……………