ಜಿಲ್ಲೆ

ಬರೋಬ್ಬರಿ 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಯಲ್ಲಾಪುರ: ತಾಲೂಕಿನ ಕೊಡ್ಲಗದ್ದೆಯಲ್ಲಿ ತೋಟವೊಂದರಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡು ಆತಂಕ ಮೂಡಿಸಿತು. ಸೋಮವಾರ ಬೆಳಗ್ಗೆ ಕೊಡ್ಲಗದ್ದೆಯ ನಾಗರಾಜ ನಾಯ್ಕ ಅವರ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಅರಬೈಲಿನ ಉರಗಪ್ರೇಮಿ ಸೂರಜ್ ಮುರಗೇಶ ಶೆಟ್ಟಿ ಸ್ಥಳಕ್ಕೆ ಆಗಮಿಸಿ, ಸುಮಾರು 10 ಅಡಿ ಉದ್ದದ ಈ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.