ಜಿಲ್ಲೆ

ಪ್ರಜಾತಂತ್ರದಲ್ಲಿ ವೈದ್ಯರ ಪಾತ್ರ ಮಹತ್ವದ್ದು

ಹುಬ್ಬಳ್ಳಿ : ಪ್ರಜಾತಂತ್ರ ವ್ಯವಸ್ಥೆಯಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ರೋಗಿಗಳ ಆರೋಗ್ಯ ಸುಧಾರಣೆಗಾಗಿ ವೈದ್ಯರು ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಇಲ್ಲಿನ ಕಿಮ್ಸ್​ನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಶಾಸಕ ಟೆಂಗಿನಕಾಯಿ, ರೋಗಿಗಳು ರೋಗಗಳಿಂದ ಗುಣಮುಖರಾಗಿ ಜೀವಿತಾವಧಿ ವಿಸ್ತರಿಸಲು ವೈದ್ಯರು ಶ್ರಮಿಸುತ್ತಾರೆ ಎಂದರು.

ಭಾರತದಲ್ಲಿ ನುರಿತ ತಜ್ಞ ವೈದ್ಯರು ಸಾಕಷ್ಟು ಜನರಿದ್ದಾರೆ. ಹಲವಾರು ವಿದೇಶಿಗರು ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಾರೆ. ಇಂತಹ ವೈದ್ಯರನ್ನು ಹೊಂದಿದ್ದಕ್ಕಾಗಿ ಭಾರತೀಯರು ಹೆಮ್ಮೆ ಪಡಬೇಕು ಎಂದು ತಿಳಿಸಿದರು.

ಕಿಮ್್ಸ ವ್ಯವಸ್ಥಾಪಕ ಡಾ. ಅರುಣಕುಮಾರ, ಡಾ. ಸಚಿನ ಹೊಸಕಟ್ಟಿ, ಡಾ. ಅಶೋಕ ಬಂಗಾರಶೆಟ್ಟರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ಸಿದ್ದೇಶ್ವರ ಕಟಕೊಳ, ಕಿರಣ ಉಪ್ಪಾರ, ಕಿಮ್್ಸ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.