ಹುಮನಾಬಾದ್: ಪಟ್ಟಣದ ಥೇರ್ ಮೈದಾನದಲ್ಲಿ ಬುಧವಾರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಒಬ್ಬನ ಕೊಲೆ ಮಾಡಲಾಗಿದೆ. ಧುಮ್ಮನಸೂರ ಗ್ರಾಮದ ಅರ್ಜುನ ಏಣಕೂರ (೪೮) ಹತ್ಯೆಯಾದವ.
ಮೂಲತಃ ಭಾಲ್ಕಿ ತಾಲೂಕಿನ ಏಣಕೂರ ಗ್ರಾಮದ ಅರ್ಜುನ ಹಲವು ವರ್ಷಗಳಿಂದ ಧುಮ್ಮನಸೂರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ. ಮಂಗಳವಾರ ಮಧ್ಯರಾತ್ರಿ ಕೆಂಪುಕಲ್ಲು ತಲೆ ಮೇಲೆ ಎತ್ತಿ ಹಾಕಿದ್ದು, ಯಾರು ಮತ್ತು ಯಾವ ಕಾರಣಕ್ಕೆ ಕೊಲೆ ಎಂಬುದು ತಿಳಿದುಬಂದಿಲ್ಲ.
ಎಸ್‌ಪಿ ಪ್ರದೀಪ್ ಗುಂಟಿ, ಹೆಚ್ಚುವರಿ ಎಸ್‌ಪಿ ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ, ಸಿಪಿಐ ಗುರುಲಿಂಗಪ್ಪ ಗೌಡ, ಪಿಎಸ್‌ಐ ಸುರೇಶಕುಮಾರ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.