ಜಿಲ್ಲೆ

ಡಿಸೆಂಬರ್‌ನಲ್ಲಿ ಕಿಗ್ಗಟ್‌ನಾಡ್ ಕ್ರಿಕೆಟ್ ಫೆಸ್ಟಿವಲ್

ಗೋಣಿಕೊಪ್ಪ:

ಕಿಗ್ಗಟ್‌ನಾಡ್ ಕ್ರಿಕೆಟ್ ಫೆಸ್ಟಿವಲ್ (ಕೆಸಿಎಫ್ ಸೀಸನ್ ೩) ಕಾಕಮಾಡ ಅಜಿತ್‌ರವರ ನೇತೃತ್ವದಲ್ಲಿ ಡಿ.೨೮,೨೯,೩೦ ಹಾಗೂ ೩೧ರಂದು ಹಾತೂರು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ರೀಡಾಕೂಟವನ್ನು ಸಂಪೂರ್ಣವಾಗಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ತಿಳಿಸಿರುವ ಆಯೋಜಕರು, ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ತಾಲೂಕಿನ ಎಲ್ಲಾ ಕ್ರಿಕೆಟ್ ಕ್ರೀಡಾಪಟುಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಕೂಟ ಐಪಿಎಲ್ ಮಾದರಿಯಲ್ಲಿ ಬಿಡ್ಡಿಂಗ್ ಮೂಲಕ ನಡೆಯಲಿದೆ.

ಈಗಾಗಲೇ ಅರ್ಜಿ ಫಾರ್ಮ್ ವಿತರಿಸಲಾಗಿದ್ದು, ಅ.೨೫ ಅರ್ಜಿ ಫಾರ್ಮ್ ಹಿಂತಿರುಗಿಸಲು ಕೊನೆಯ ದಿನವಾಗಿದೆ. ನ.೧೨ರ ಭಾನುವಾರ ಬಿಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಕೂಟದಲ್ಲಿ ಹುದಿಕೇರಿ ವಾರಿಯರ್ಸ್, ಎಜೆ ಬಾಯ್ಸ, ಬಿವೈಸಿ ಕಾಕೋರು, ಡ್ರೀಮ್ ಕ್ರಷರ್ಸ್, ಟೀಮ್ ಐಕನಿಕ್, ಸ್ಟಾರ್ ವಾರಿಯರ್ಸ್, ಪ್ರೊಟೆಕ್ಟ್ ಕ್ರಿಕೆಟರ್ಸ್, ಟೀಮ್ ಐಲೀನ್, ಟೀಮ್ ಎಬಿಡಿ, ಎವನ್ ಕ್ರಿಕೆಟರ್ಸ್, ಪ್ರತಿಭಾ ಕ್ರಿಕೆಟರ್ಸ್, ಸ್ಟಾರ್ ಇಲೆವೆನ್, ನ್ಯೂ ಸ್ಟ್ರೈಕರ್, ಮನು ಕ್ರಿಕೆಟರ್ಸ್, ರೈಸಿಂಗ್ ಕಮಾಂಡೋಸ್, ಬ್ಲೂ ಬಾಯ್ಸ ತಂಡಗಳು ಸೇರಿಂತೆ ೧೬ ತಂಡಗಳು ಸೆಣಸಾಡಲಿದೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೭೭,೭೭೭ ಮತ್ತು ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ ೪೪,೪೪೪ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಜತೆಗೆ ಎಲ್ಲಾ ವೈಯಕ್ತಿಕ ಬಹುಮಾನಗಳು, ಉಳಿದ ೧೪ ತಂಡಗಳಿಗೆ ಆಕರ್ಷಕ ಟ್ರೋಫಿ ಕೊಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.