ಜಿಲ್ಲೆ

ಛದ್ಮವೇಷದಲ್ಲಿ ಮಿಂಚಿದ ಮಕ್ಕಳು

ಹುಬ್ಬಳ್ಳಿ: ಮಕ್ಕಳ ದಿನಾಚರಣೆಯ ನಿಮಿತ್ತ ನಗರದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ವೇಷ ಭೂಷಣದಲ್ಲಿ ಮಕ್ಕಳು ಮಿಂಚಿದರು.

ಪ್ರಾಚಾರ್ಯು ಡಾ. ಕ್ಯಾಥರಿನ್ ದಿನೇಶ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅವರಲ್ಲಿರುವ ಪ್ರತಿಭೆ ಪ್ರದರ್ಶಿಸಲು, ಸಮಾಜದ ಉತ್ತಮ ಪ್ರಜೆಯಾಗಲು, ಸೃಜನಾತ್ಮಕತೆ ಅಭಿವೃದ್ಧಿಪಡಿಸಲು ಇಂಥ ಕಾರ್ಯಕ್ರಮ ಸಹಕಾರಿಯಾಗಿವೆ ಎಂದರು.

ನಿರ್ಣಾಯಕಿ, ಐಬಿಎಂಆರ್ ಕಾಲೇಜ್ ಪ್ರಾಚಾರ್ಯು ಗೌರಿ ಬುಲ್ಲನವರ್ ಮಾತನಾಡಿ, ಪಾಲಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ಹೆಚ್ಚಿನ ಸಾಧನೆ ಮಾಡಬಲ್ಲರು ಎಂದು ಹೇಳಿದರು.

ಶಾಲೆಯ ಅಧ್ಯಕ್ಷ ಭವರಲಾಲ ಜೈನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹೇಂದ್ರ ಪಾಲ್ಗೊತಾ, ಬಸವರಾಜ, ಫ್ಯಾಷನ್ ಡಿಜೈನರ್ ವಿನುತಾ ಸಂದೀಪ, ಪ್ರಿಯಾರಾಜ ಇದ್ದರು.

ವಿಜೇತರು:

ಛದ್ಮವೇಷ ಸ್ಪರ್ಧೆಯ ನರ್ಸರಿಯಿಂದ ಯುಕೆಜಿ ವಿಭಾಗದಲ್ಲಿ ದಿವ್ಯಾಂಶ ಜೈನ್ ಪ್ರಥಮ, ಹಿಭಾ ಕೋತ್ವಾಲ್ ಮತ್ತು ನಕ್ಷತ್ರ ಹೂಗಾರ ದ್ವಿತೀಯ, ಅಭಿನವ ಮುನಿಯಪ್ಪನವರ ಹಾಗೂ ಅಮನಾ ಮಕಾಂದಾರ್ ತೃತೀಯ, ಐಜಾ ಕೋತ್ವಾಲ್-ಅರಿಯಾ ಓಸ್ವಾಲ್ ಸಮಾಧಾನಕರ ಬಹುಮಾನ ಪಡೆದರು.

1 ಮತ್ತು 2ನೇ ತರಗತಿ ವಿಭಾಗದಲ್ಲಿ ಶೊರನ್ ಮೋಸಿಸ್ ಪ್ರಥಮ, ಮುದ್ರಿಕಾ ಬೆಲ್ಲದ ದ್ವಿತೀಯ, ಸೋಹಾ ಮುಲ್ಲಾ ತೃತೀಯ, ರಿಷಬ್ ಮದ್ರಾಸಿ-ರೂಫಿಯಾ ಗುಡಗೇರಿ ಸಮಾಧಾನಕರ ಬಹುಮಾನ ಗಳಿಸಿದರು. 3ಮತ್ತು 4ನೇ ತರಗತಿ ವಿಭಾಗದಲ್ಲಿ ಸಾಯಿನಾಥ ಮಿಸ್ಕಿನ್ ಪ್ರಥಮ, ಓಂಕಾರ ಮದ್ರಾಸಿ ದ್ವಿತೀಯ, ಆರುಷಿ ಸಿಂದಗಿ ತೃತೀಯ ಹಾಗೂ ರುಚಿ ಜೈನ್ ಸಮಾಧಾನಕರ ಬಹುಮಾನ ಪಡೆದರು.