ಜಿಲ್ಲೆ

ಉತ್ತಮ ಆರೋಗ್ಯಕ್ಕೆ ಕಿಡ್ನಿ ಅತ್ಯವಶ್ಯಕ

Mysuru - Desk - Ravikumar

ಮಂಡ್ಯ ಪ್ರತಿಯೊಬ್ಬರೂ ತಮ್ಮ ಕಿಡ್ನಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವಿಜ್ಞಾನಶಾಸ್ತ್ರ ಅಧ್ಯಾಪಕ ಆರ್.ಜಿ.ಮಹದೇವಸ್ವಾಮಿ ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.


ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕಿಡ್ನಿ ದಿನ ಹಾಗೂ ವಿಶ್ವ ಗ್ರಾಹಕರ ದಿನಾಚರಣೆ ಮತ್ತು ಆಲ್ಬರ್ಟ್ ಐನ್‌ಸ್ಟೀನ್ ಜನ್ಮದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.


ಹುಟ್ಟಿನಿಂದ ತನ್ನ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ವಿಶ್ರಾಂತಿ ಪಡೆಯದೆ ಚಲನೆಯಲ್ಲಿರುವುದು ಎಂದರೆ ಜೀವ ಸಂಕುಲಗಳು ಮಾತ್ರ. ಮನುಷ್ಯನ ಅಂಗಾಗ ರಚನೆಯು ಬಹಳ ಅದ್ಭುತ ಕಲಾತ್ಮಕವಾಗಿ ಮಾರ್ಪಟ್ಟಿರುವುದರ ಜತೆಗೆ ದೇಹದ ನರಮಂಡಲ ಸೇರಿದಂತೆ ಎಲ್ಲ ಅಂಗಗಳ ನಿಯಂತ್ರಣಕ್ಕೂ ಒಂದಕ್ಕೊಂದು ಸಂಪರ್ಕ ಹೊಂದಿದೆ. ಇದೆಲ್ಲದರಲ್ಲೂ ಮಾನವನ ಆರೋಗ್ಯ ಸುಸ್ಥಿತಿಯಲ್ಲಿರಲು ಕಿಡ್ನಿ ಕಾರ್ಯ ನಿರ್ವಹಿಸಬೇಕು. ಹಾಗಾಗಿ, ಆರೋಗ್ಯ ಉತ್ತಮ ಸ್ಥಿತಿಯಲ್ಲಿರಲು ಕಿಡ್ನಿ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಬಸವರಾಜು ವಹಿಸಿದ್ದರು. ಸಹ ಶಿಕ್ಷಕರಾದ ಪಂಕಜಾ, ಮಲ್ಲಿಕಾರ್ಜುನ, ಕೆಂಪರಾಜು, ಕುಸುಮ, ರೋಜಾ ಉಪಸ್ಥಿತರಿದ್ದರು.