ಜಿಲ್ಲೆ

ವೃದ್ಧೆಯ ಚಿನ್ನದ ಸರ ಅಪಹರಣ

ಮೈಸೂರು: ಸ್ಕೂಟರ್‌ನಲ್ಲಿ ಬಂದ ಕಳ್ಳನೊಬ್ಬ ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ವಿದ್ಯಾರಣ್ಯಪುರಂ 6 ನೇ ಕ್ರಾಸ್‌ನ ಸದಾಶಿವನ್ ಅವರ ಪತ್ನಿ ನಾಗರತ್ನಾ (78) ಸರ ಕಳೆದುಕೊಂಡವರು. ಸೋಮವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ನಡೆದು ಹೋಗುತ್ತಿದ್ದಾಗ ಎದುರಿಗೆ ಸ್ಕೂಟರ್‌ನಲ್ಲಿ ಬಂದ ಕಳ್ಳ ನಾಗರತ್ನಾ ಅವರ 60 ಗ್ರಾಂ ತೂಕದ ಚಿನ್ನದ ಸರವನ್ನು ಕೀಳಲು ಯತ್ನಿಸಿದರು. ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಸುಮಾರು 16 ಗ್ರಾಂ ತೂಕದ ಸರ ಕಳ್ಳರ ಪಾಲಾಗಿದೆ.

ಸ್ಥಳಕ್ಕೆ ಡಿಸಿಪಿ ಕೆ.ಎನ್. ಸುಂದರ್‌ರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತ ಮುತ್ತಲ ಸಿಸಿ ಟಿವಿ ಮೂಲಕ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.