ಜಿಲ್ಲೆ

ಕಿಡ್ನಾಪರ್ ಅರೆಸ್ಟ್ಹ, ಣಕ್ಕಾಗಿ ಅಪಹರಣ

ಶಿವರಾಜ.ಎಂ

ಬೆಂ.ಗ್ರಾಮಾಂತ

ಹಣಕ್ಕಾಗಿ ಇಬ್ಬರನ್ನು ಅಪಹರಿಸಿದ್ದ ಕೋಲಾರ ಜಿಲ್ಲೆಯ ಕರ್ನಾಟಕ ಜನಾಭಿವೃದ್ದಿ ರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ನಾಗೇಶ (28) ಸೇರಿ ಇಬ್ಬರು ಅಪಹರಣಕಾರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಸೂಲಿಬೆಲೆ ಠಾಣೆ ಪೊಲೀಸರು ಇಬ್ಬರು ಅಪಹೃತರನ್ನು ರಕ್ಷಿಸಿದ್ದಾರೆ.

ಅಸ್ಸಾಂ ಬಿಕಾಷ್ ಬರುವ (28) ಮತ್ತು ದಿಪೇನ್‌ಹುರಂಗ್ (30) ಎಂಬವರನ್ನು ರಕ್ಷಿಸಿರುವ ಪೊಲೀಸರು ಕೋಲಾರ ಮೂಲದ ಬಾಬುರೆಡ್ಡಿ(34), ಲಕ್ಷ್ಮೀಪತಿ (37) ಎಂಬುವರನ್ನು ಬಂಧಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ಅಪಹರಣ

ಸೂಲಿಬೆಲೆ ಹೋಬಳಿ ಪಿಲ್ಲಗುಂಪ ಗ್ರಾಮದ ಬಳಿ ಕಾರಿನಲ್ಲಿ ಬಂದ ಆರೋಪಿಗಳು ಸಂತ್ರಸ್ತರನ್ನು ಪರಿಚಯ ಮಾಡಿಕೊಂಡು ತಿಂಗಳಿಗೆ 18 ಸಾವಿರ ರೂ.ಬರುವ ಕೆಲಸ ಕೊಡಿಸುವುದಾಗಿ ಹೇಳಿ ಪುಸಲಾಯಿಸಿದ್ದರು. ಬಳಿಕ ಕಾರಿನ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಇಬ್ಬರನ್ನು ಕಾರಿನಲ್ಲಿ ಬಲವಂತಾಗಿ ಕೂರಿಸಿಕೊಂಡು ಬೇತಲೂರು ಕಡೆ ಪ್ರಯಾಣ ಬೆಳೆಸಿದ್ದರು.

ಕರೆ ಮಾಡಿ ಹಣಕ್ಕೆ ಡಿಮಾಂಡ್:

ಅಪಹರಣಕಾರರು ಅಪಹೃತರ ಮೊಬೈಲ್‌ನಲ್ಲಿ ಅವರ ಕುಟುಂಬಸ್ಥರಿಗೆ ಕರೆ ಮಾಡಿ 50 ಸಾವಿರ ರೂ.ಗಳನ್ನುಖಾತೆಗೆೆ ಹಾಕುವಂತೆ ಸೂಚನೆ ನೀಡಿದ್ದರು. ಹಣ ಹಾಕದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಸಿನಿಮೀಯ ರೀತಿ ಬಂಧನ:

ಈ ಬಗ್ಗೆ ಕುಟುಂಬಸ್ಥರು ಸೂಲಿಬೆಲೆ ಠಾಣೆಯಲ್ಲಿ ದೂರು ನೀಡಿದ್ದರು. ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಅಪಹೃತರೊಂದಿಗೆ ಪೋನ್‌ನಲ್ಲಿ ಮಾತನಾಡುವಂತೆ ದೂರುದಾರಿಗೆ ತಿಳಿಸಿ ಮೊಬೈಲ್ ಲೊಕೇಷನ್ ಜಾಡು ಹಿಡಿದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಕೋಲಾರ ಜಿಲ್ಲೆ ಬೇತಮಂಗಲ ರಸ್ತೆಯ ಬಟ್ಟರಹಳ್ಳಿ ಅರಣ್ಯ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ವೇದಿಕೆ ರಾಜ್ಯಾಧ್ಯಕ್ಷ ನಾಮಲಕ:

ಮೂವರು ಆರೋಪಿಗಳ ಪೈಕಿ ಬಾಬುರೆಡ್ಡಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಆರೋಪಿ ಲಕ್ಷ್ಮೀಪತಿ ಕೂಲಿ ಕೆಲಸ ಮಾಡುತ್ತಿದ್ದ, ಪ್ರಮುಖ ಅರೋಪಿ ನಾಗೇಶ ಕೋಲಾರ ಜಿಲ್ಲೆಯ ಕರ್ನಾಟಕ ಜನಾಭಿವೃದ್ದಿ ರಕ್ಷಣಾವೇದಿಕೆ ಅಧ್ಯಕ್ಷ ಎನ್ನಲಾಗಿದೆ. ಇದೇ ನಾಮಲಕವಿರುವ ಕಾರಿನಲ್ಲಿ ಆರೋಪಿಗಳು ಸಂತ್ರಸ್ತರನ್ನು ಅಪಹರಿಸಿದ್ದರು.

ಉತ್ತರ ಭಾರತೀಯರು:

ಕನ್ನಡ ಭಾಷೆಯೇ ಬಾರದ ಬಿಕಾಷ್‌ಬರುವ (28)ಮತ್ತು ದಿಪೇನ್‌ಹುರಂಗ್ ಕೂಲಿ ಕಾರ್ಮಿಕರಾಗಿದ್ದು, ಆರ್ಥಿಕವಾಗಿಯೂ ಬಲವಾಗಿಲ್ಲ, ಆದರೂ ಇವರನ್ನೇ ಟಾರ್ಗೆಟ್ ಮಾಡಿ ಅಪಹರಿಸಿದ್ದರ ಹಿಂದೆ ಬೇರ‌್ಯಾವ ಉದ್ದೇಶವಿದೆ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ವೃತ್ತಿಪರ ಅಪಹರಣಕಾರರಲ್ಲ ಎಂಬುದು ತಿಳಿದುಬಂದಿದೆ. ಆದರೂ ಕೋಲಾರದಿಂದ ಬಂದು ಸಂತ್ರಸ್ತರ ಚಲನವಲನ ಗಮನಿಸಿ ಅಪಹರಿಸಿದ್ದಾರೆ. ಆರೋಪಿಗಳ ಬಂಧನದ ವೇಳೆ ಚಿಕ್ಕದಾದ ಚಾಕು ಹೊರತುಪಡಿಸಿ ಬೇರೆ ಮಾರಕಾಸಗಳು ಇರಲಿಲ್ಲ, ದೊಡ್ಡ ಮೊತ್ತದ ಹಣಕ್ಕೂ ಬೇಡಿಕೆ ಇಟ್ಟಿಲ್ಲ. ಸಂಸ್ತತ್ರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿಲ್ಲ, ಅಪಹರಣದುದ್ದಕ್ಕೂ ಕಾರಿನಲ್ಲೇ ಸಂತ್ರಸ್ತರನ್ನು ಕೂರಿಸಿಕೊಂಡಿದ್ದಾರೆ. ಈ ಎಲ್ಲ ದೃಷ್ಟಿಕೋನದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆ ಪೊಲೀಸ್ ಅಧೀಕ್ಷಕ ರವಿಚನ್ನಣ್ಣನವರ್, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಹೊಸಕೋಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷ ಉಮಾಶಂಕರ್, ನಂದಗುಡಿ ವೃತ್ತದ ರಂಗಸ್ವಾಮಿ ನೇತೃತ್ವದಲ್ಲಿ ಪಿಎಸ್‌ಐ ರಮೇಶ್ ಗುಗ್ಗರಿ ನೇತೃತ್ವದ ತಂಡ ಆರೋಪಿಗಳನ್ನು ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿದೆ.