filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಕಿಚ್ಚ ಹಾಯ್ದು ಭಕ್ತಿ ಸಮರ್ಪಣೆ

ಪ್ರಶಾಂತ ಹೂಗಾರ

ಬೋರಗಾಂವ: ಸಮೀಪದ ಬಿದರಳ್ಳಿಯ ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವರ ಜಾತ್ರೆಯು ಮಂಗಳವಾರದಿಂದ ಆರಂಭಗೊಂಡಿದ್ದು, ಗುರುವಾರ 5,000ಕ್ಕೂ ಹೆಚ್ಚು ಭಕ್ತರು ಕಿಚ್ಚ ಹಾಯುವ ಮೂಲಕ ತಮ್ಮ ಹರಕೆ ತೀರಿಸಿದರು.

ಹರಹರ ಮಹಾದೇವ ಎಂಬ ಘೋಷಣೆಗಳು ಮೊಳಗಿದವು. ಸಿದ್ದಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿದವು. ಬುಧವಾರ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದವು. ಗುರುವಾರ ಭಕ್ತರು ಕಿಚ್ಚ ಹಾಯುವ ಮೂಲಕ ತಮ್ಮ ಹರಕೆ ತೀರಿಸಿದರು. ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಂಜೆ ಅದ್ದೂರಿ ಕುಸ್ತಿ ಪಂದ್ಯಗಳು ನಡೆದವು.