ವಿಟ್ಲ: ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಬಂಟ್ವಾಳ ತಾಲ್ಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ತಂಡವು ಪ್ರಥಮ ಸ್ಥಾನ ಗಳಿಸಿದೆ.
ವಿದ್ಯಾರ್ಥಿಗಳಾದ ಪವನ್ ಕುಮಾರ್, ಶ್ರವಣ್ ಶೆಟ್ಟಿ, ಯಾಶೀತ್, ಪವನ್ ಕುಮಾರ್, ಸಾಗರ್ ಕುಮಾರ್, ರಂಜಿತ್, ಪ್ರಥಮ್, ಕುಶನ್, ಆದರ್ಶ್, ಚರಣ್ ರಾಜ್, ಜೀವನ್, ಮುಹಮ್ಮದ್ ಮುಝಮಿಲ್, ಪ್ರನೀತ್ ಭಾಗವಹಿಸಿರುತ್ತಾರೆ. ತಂಡದ ವ್ಯವವಸ್ಥಾಪಕರಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಮಾಧವ ವಿ ಎಸ್ ಹಾಗೂ ಭರತ್ ಸಹಕರಿಸಿದರು. ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ್ ಗೌಡ ತರಬೇತಿಯನ್ನು ನೀಡಿದ್ದಾರೆ.