ಜಿಲ್ಲೆ

ಖತರ್ನಾಕ್​ ಕಳ್ಳ, ಕಳ್ಳಿ ಬಂಧನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ಆಟೋ ಹತ್ತಿದ ಮಹಿಳೆಯನ್ನು ರ್ನಿಜನ ಪ್ರದೇಶಕ್ಕೆ ಕರೆದೊಯ್ದು ಚಿನ್ನಾಭರಣ ದೋಚಿ ನಾಪತ್ತೆಯಾಗಿದ್ದ ಆಟೋ ಚಾಲಕ ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಾನುಕುಂಟೆ ಸಮೀಪದ ಹನಿಯೂರ ನಿವಾಸಿ ಆಟೋ ಚಾಲಕ ರು ಮತ್ತು ಚೆಲ್ಲಹಳ್ಳಿಯ ಶ್ವೇತಾ ಬಂಧಿತರು. ನಗರದ ತೂಬಗೆರೆ ಪೇಟೆ ಯಶೋದಮ್ಮ ಎನ್ನುವವರು ಜ.11ರಂದು ಮನೆಗೆ ತೆರಳಲು ಕೊಂಗಾಡಿಯಪ್ಪ ಕಾಲೇಜು ಬಳಿ ಬಂದ ಆಟೋ ಹತ್ತಿದ್ದಾರೆ. ಚಾಲಕ ಹಾಗೂ ಓಂಶಕ್ತಿ ಮಾಲಾಧಾರಿ ಮಹಿಳೆ ಸೇರಿ ಯಶೋದಮ್ಮ ಅವರನ್ನು ನಾಗಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿಯ ರ್ನಿಜನ ಪ್ರದೇಶಕ್ಕೆ ಕರೆದೊಯ್ದು, 33ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಗ್ರಾಂ ತೂಕದ ಓಲೆ ದೋಚಿದ್ದಾರೆ, ನಂತರ ಆಕೆಯನ್ನು ಆಲಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್​ಸ್ಪೆಕ್ಟರ್​ ಅಮರೇಶ್​ ಗೌಡ ನೇತೃತ್ವದ ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.