ಮೈಸೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದನ್ನು ಸ್ವಾಗತಿಸುತ್ತೇನೆ. ಎಚ್.ಡಿ.ದೇವೇಗೌಡರ ಬಳಿಕ ರಾಜ್ಯಕ್ಕೆ ಮತ್ತೊಂದು ಅವಕಾಶ ಸಿಗುವ ಕಾಲ ಬರುತ್ತಿದ್ದು, ಇದನ್ನು ರಾಜ್ಯದ ಜನತೆ ಒಗ್ಗಟ್ಟಿನಿಂದ ಸ್ವಾಗತಿಸಬೇಕು ಎಂದು ವಿಶ್ವನಾಥ್ ಹೇಳಿದರು.
ಶೋಷಿತ ಸಮುದಾಯದಿಂದ ಬಂದಿರುವ ಖರ್ಗೆ ಅವರು ಅಪಾರ ರಾಜಕೀಯ ಹಾಗೂ ಆಡಳಿತ ಅನುಭವ ಹೊಂದಿದ್ದಾರೆ. ಅವರು ಪ್ರಧಾನಿಯಾದರೆ ದೇಶದ ಜನ ಸಂತೋಷಪಡುತ್ತಾರೆ. ಆದ್ದರಿಂದ ಅವರು ಪ್ರಧಾನಿಯಾಗಬೇಕು ಎಂದು ಒತ್ತಾಯಿಸಿದರು.