ಜಿಲ್ಲೆ

ಪ್ರಿಯಾಂಕ ಗಾಂಧಿಯನ್ನು ಚನ್ನಮ್ಮನಿಗೆ ಹೋಲಿಕೆ ಮಾಡಿದ ಖರ್ಗೆ, ರಾಣಿಯ ಕಾಲಿನ ಧೂಳಿಗೂ ಸಮಾನರಿಲ್ಲ; ಕೂಡಲಸಂಗಮ ಸ್ವಾಮೀಜಿ ಕಿಡಿ

ಗದಗ: ಕಿತ್ತೂರ ರಾಣಿ ಚನ್ನಮ್ಮನ ಕಾಲಿನ ಧೂಳಿಗೂ ಯಾರು ಸಮಾನರಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕ ಗಾಂಧಿ ಅವರನ್ನು ವೀರರಾಣಿ ಕಿತ್ತೂರು ಚನ್ನಮ್ಮನಿಗೆ ಹೋಲಿಸಿ ಹೇಳಿಕೆ ನೀಡಿದ್ದರು.

ಈ ಹೇಳಿಕೆ ವಿರುದ್ಧ ಗದಗನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ವಾಮೀಜಿ, ಪ್ರಿಯಾಂಕ ಗಾಂಧಿ ಅವರನ್ನು ಚನ್ನಮ್ಮಳಿಗೆ ಹೋಲಿಕೆ ಮಾಡಬಾರದು. ಚನ್ನಮ್ಮಳ ಕಾಲಿನ ಧೂಳಿಗೂ ಯಾರೂ ಸಮಾನರಿಲ್ಲ ಎಂದು ಕಿಡಿಕಾರಿದ್ದಾರೆ.