ಖಾನಾಪುರ: ತಾಲೂಕಿನ ಅರಣ್ಯ ಪ್ರದೇಶ ಮತ್ತು ರಸ್ತೆ ಸೌಲಭ್ಯಗಳಿಲ್ಲದಂತಹ ಗ್ರಾಮಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವುದು ಕಠಿಣ ಕಾರ್ಯ. ಇಲ್ಲಿನ ಪತ್ರಕರ್ತರು ವಿವಿಧ ಸಮಸ್ಯೆಗಳ ಬಗ್ಗೆ ಜಾಗತಿ ಮೂಡಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದಿಂದ ಶನಿವಾರ ಹಮ್ಮಿಕೊಂಡಿದ್ದ ಖಾನಾಪುರ ಪತ್ರಕರ್ತರ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಹಿರಿಯ ಪತ್ರಕರ್ತರು ಮತ್ತು ಪತ್ರಿಕೆ ಮಾರಾಟಗಾರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನ ನಾಗರಿಕರು ಮತ್ತು ವಿವಿಧ ಸಂಟನೆಗಳಿಂದ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾ-ಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪತ್ರಕರ್ತರ ಭವನ ಮತ್ತು ಪತ್ರಕರ್ತರಿಗೆ ಆರೋಗ್ಯ ವಿಮೆ ಕುರಿತು ಮನವಿ ಸಲ್ಲಿಸಲಾಯಿತು. ಖಾನಾಪುರ ತಾಲೂಕು ಕುಸ್ತಿಪಟುಗಳ ಸಂ, ತಾಲೂಕು ಬ್ಲಾಕ್ ಕಾಂಗ್ರೆಸ್, ವಿವಿಧ ಮುಖಂಡರು ಮತ್ತು ರಾಯತ್ ಅಸೋಸಿಯೇಷನ್ ಪತ್ರಕರ್ತರನ್ನು ಸನ್ಮಾನಿಸಿತು.
ಪತ್ರಕರ್ತ ಪಿರಾಜಿ ಕುರ್ಹಾಡೆ ಅಧ್ಯತೆ ವಹಿಸಿದ್ದರು. ಶಾಸಕ ವಿಠ್ಠಲ ಹಲಗೇಕರ, ಜಿಲ್ಲಾಧ್ಯ ದಿಲೀಪ್ ಕುರಂದವಾಡೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ದಿಗಂಬರ ಪಾಟೀಲ, ಅರವಿಂದ ಪಾಟೀಲ, ಈಶ್ವರ ಘಾಡಿ, ಮಹಾಂತೇಶ ರಾವುತ್, ಎಸ್.ಜಿ.ಶಿಂಧೆ, ಪ್ರಮೋದ ಕೋಚೇರಿ, ಕೆ.ಪಿ.ಪಾಟೀಲ, ಬಾಬುರಾವ ದೇಸಾಯಿ, ಮಲ್ಲಪ್ಪ ಮಾರಿಹಾಳ, ರವಿ ಪಾಟೀಲ, ಪ್ರಕಾಶ ಚವ್ಹಾಣ, ಲಕ್ಷ$್ಮಣ ಕಾಸರಲೇಕರ್, ಲಕ್ಷ$್ಮಣ ಬಾಮನೆ, ಹನುಮಂತ ಗುರವ, ಮರಿಯಪ್ಪ ಪಾಟೀಲ, ಶಂಕರ ಪಾಟೀಲ, ಸುರೇಶ ಪಾಟೀಲ, ಮುರಳೀಧರ ಪಾಟೀಲ ಇತರರಿದ್ದರು.