ಜಿಲ್ಲೆ

ಖಾನಾಪುರ ಸಮಗ್ರ ಪ್ರಗತಿಗೆ ಶ್ರಮ

ಸೋಮಲಿಂಗ ತಳವಾರ

ಖಾನಾಪುರ: ಕಿರವಾಲೆಯ ನವದುರ್ಗೆಯರ ಉತ್ಸವಕ್ಕೆ ಪ್ರತಿವರ್ಷ ಗೋವಾದಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶದ ಸಮಗ್ರ ಅಭಿವದಿಟಛಿಗೆ ಶ್ರಮಿಸುವುದಾಗಿ ಶಾಸಕ ವಿಠ್ಠಲ ಹಲಗೇಕರ್​ ಭರವಸೆ ನೀಡಿದರು.

ತಾಲೂಕಿನ ಕಿರವಾಲೆ ನವದುರ್ಗಾ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹನ್ನೆರಡನೇ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗ್ಗೆ ಹೋಮ ಹವನ, ಮಹಾಭಿಷೇಕ, ನವಚಂಡಿ ಹವನ, ಕಲಾ ವದಿಟಛಿ ಪವನ ನಡೆದವು. ಅನ್ನಪ್ರಸಾದ, ರಾತ್ರಿ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಣ್ಯರಿಂದ ದೇಣಿಗೆ ಕೂಪನ್​ ಡ್ರಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಟ್ರಸ್ಟ್​ ಅಧ್ಯ ಮನೋಹರ್​ ಬೋರ್ಕರ್​, ಗೋವಾದ ಮಾಜಿ ಸಚಿವ ಮಹಾದೇವ ನಾಯಕ, ಉದ್ಯಮಿ ಜಯಂತ ಮೆಂಟಿಂಗ್ಕರ್​, ಗೋವಾ ಶಿಣ ಇಲಾಖೆಯ ನಿವತ್ತ ಹಿರಿಯ ಅಧಿಕಾರಿ ದಯಾನಂದ ಪಹ್ಡೇಕರ್​, ನವದುರ್ಗಾ ಟ್ರಸ್ಟ್​ ಉಪಾಧ್ಯ ವಿಜಯ್​ ಕಾಮತ, ಲೆಲಾ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸದಾನಂದ ಪಾಟೀಲ, ಬಿಜೆಪಿ ಯುವ ಮುಖಂಡರಾದ ಕಿಶೋರ್​ ಹೆಬ್ಬಾಳ್ಕರ್​, ರಾಜು ಕರಂಬಳ್ಕರ್​ ಇತರರಿದ್ದರು.