ಜಿಲ್ಲೆ

ಖಾನಾಪುರ ಅಭಿವೃದ್ಧಿಗೆ ಸದಾ ಬದ್ಧ

ಎಂ.ಎಸ್​.ಹಿರೇಮಠ ಬೆಳಗಾವಿ

ಖಾನಾಪುರ: ತಾಲೂಕಿನಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ, ಶಾಲೆ ಹಾಗೂ ದೇವಾಲಯ ಸೇರಿ ವಿವಿಧ ಅಭಿವೃದ್ಧಿಗೆ ಅನುದಾನ ಒದಗಿಸಿ ಖಾನಾಪುರ ಏಳಿಗೆಗೆ ಶ್ರಮಿಸಲಾಗುವುದು ಎಂದು ವಿಧಾನಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿ ಸೋಮವಾರ 1.5 ಕೋಟಿ ರೂ. ವೆಚ್ಚದಲ್ಲಿ ಶ್ರೀ ಸ್ವಯಂಭು ಮಾರುತಿ ಮಲಪ್ರಭಾ ಯಾತ್ರಾ ಸ್ಥಳದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್​ ಮುಖಂಡ ಮೃಣಾಲ್​ ಹೆಬ್ಬಾಳ್ಕರ್​ ಸ್ವಯಂಭು ಮಾರುತಿ ಪೂಜೆ ನೆರವೇರಿಸಿದರು. ಕಬನಾಲಿ ಗ್ರಾಮದ ಶಿವ ದೇವಾಲಯದ ಜೀಣೋರ್ದ್ಧಾರಕ್ಕೆ 5 ಲ ರೂ. ದೇಣಿಗೆ ನೀಡಿದ ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯ ಲಕ್ಷ$್ಮಣ ಕಾಸರ್ಲೇಕರ್​, ಶಿವ ಪ್ರತಿಷ್ಠಾನ ಹಿಂದುಸ್ತಾನ ರಾಜ್ಯ ಪ್ರಾಂತ ಮುಖ್ಯಾಧಿಕಾರಿ ಕಿರಣ ಗಾವಡೆ, ಗ್ರಾಪಂ ಅಧ್ಯೆ ಸರಸ್ವತಿ ಭರಂಕರ್​, ಚೇತನ್​ ಮನೇರಿಕರ್​, ಗ್ರಾಪಂ ಸದಸ್ಯೆ ಪಾರ್ವತಿ ನಾಯಕ, ಅಪ್ಪಯ್ಯ ಕೋಡಿಲಿ, ಇಂಜನಿಯರ್​ ವಿಜಯ ಕಲ್ಲೋಳಿ, ತಾಪಂ ಸಹಾಯಕ ನಿರ್ದೇಶಕ ವಿಜಯ ಕೋಲಿನ, ಪಿಡಿಒ ಎಂ.ಎಂ. ಮೊಕಾಶಿ, ಸುನೀಲ ಚಿಗುಳಕರ, ನೇತಾಜಿ ಘಾಡಿ, ಸಖರಾಮ ಧುರಿ, ನಾಣು ಗಾವಡೆ, ಪುಂಡಲೀಕ ಪಾಟೀಲ, ವಿನಾಯಕ್​ ಮುತ್ಗೇಕರ್​ ಇತರರಿದ್ದರು.