ಜಿಲ್ಲೆ

ಪ್ರಗತಿಪಥದಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ

ವಿಜಯವಾಣಿ ಸುದ್ದಿಜಾಲ ಬೈಂದೂರು

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಗಣನೀಯ ಸಾಧನೆ ಮಾಡಿದೆ. ಈ ಬಾರಿ ಆಡಳಿತ ಮಂಡಳಿಗೆ ಇತ್ತೀಚೆಗೆ ಚುನಾವಣೆಯಲ್ಲಿ ಹಲವಾರು ಆರೋಪ, ಅಪಪ್ರಚಾರ, ಹಣಬಲದ ನಡುವೆಯೂ ಸಂಘದ ನಿಷ್ಠಾವಂತ ಸದಸ್ಯರು ನಮ್ಮ ಮೇಲೆ ವಿಶ್ವಾಸವಿರಿಸಿ ತಂಡವನ್ನೇ ಮರು ಆಯ್ಕೆ ಮಾಡಿರುವುದು ಸತ್ಯಕ್ಕೆ ಸಂದ ಜಯ ಎಂದು ಸಂಘ ನೂತನ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಸಂಘ ಕಚೇರಿಯಲ್ಲಿ ಗುರುವಾರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತ ಪರವಾದ ಸಮಗ್ರ ಚಟುವಟಿಕೆ ನಡೆಸಲು ಖಂಬದಕೋಣೆಯಲ್ಲಿ ಸ್ವಂತ ನಿವೇಶನ ಖರೀದಿಸಿ, ಕಟ್ಟಡ ನಿರ್ಮಿಸಲಾಗುತ್ತಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಯೋಜನೆ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಮಂಜು ದೇವಾಡಿಗ, ನಿರ್ದೇಶಕರಾದ ಗುರುರಾಜ ಹೆಬ್ಬಾರ್, ಪ್ರಕಾಶ ಎಸ್.ಪೂಜಾರಿ, ರಾಜೇಶ ದೃವಾಡಿಗ, ದಿನಿತಾ ಶೆಟ್ಟಿ, ಕೆ.ಲಲಿತಾ ಪೂಜಾರಿ, ಉದಯಕುಮಾರ್ ಶೆಟ್ಟಿ, ಈಶ್ವರ ಹಕ್ಲತೋಡು, ಭರತ್ ದೇವಾಡಿಗ, ಹೂವ ನಾಯ್ಕ ಇದ್ದರು. ಸಹಕಾರ ಇಲಾಖೆ ಅಧಿಕಾರಿ ರೋಹಿತ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಸಿಇಒ ವಿಷ್ಣು ಆರ್. ಪೈ ವಂದಿಸಿದರು.

ಸಂಘದಲ್ಲಿ 26 ವರ್ಷದಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಕೃಷಿ ಪತ್ತಿನ ಸಹಕಾರಿ ಸಂಸ್ಥೆ ಸವಾಲು ಎದುರಿಸುತ್ತಿರುವ ಪ್ರಸಕ್ತ ಕಾಲದಲ್ಲಿ ತಮ್ಮ ಸಂಘ ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಸಧೃಡವಾಗಿ ಎದ್ದು ನಿಂತಿದೆ. ಸಂಘದ ಸದಸ್ಯರು ರೈತರಾಗಿರುವ ಕಾರಣ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳಿಗೆ ಸಂಘ ಆದ್ಯತೆ ನೀಡುತ್ತಾ ಬಂದಿದೆ. ಗಳಿಸಿದ ಲಾಭವನ್ನು ರೈತರ ಒಳಿತಿಗೆ ಬಳಸುತ್ತದೆ. ರೈತರಿಗೆ ಕೃಷಿ ಮಾಹಿತಿ, ತರಬೇತಿ, ಸರ್ಕಾರಿ ಯೋಜನೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೃಷಿ ಅಧಿಕಾರಿಯನ್ನು ನೇಮಕ ಮಾಡಿಕೊಂಡಿದೆ. -ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸಂಘದ ನೂತನ ಅಧ್ಯಕ್ಷ https://www.vijayavani.net/sugarcane-production-down-supply-down https://www.vijayavani.net/free-dental-treatment-camp-in-chara