ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಂದ ಮತ ಯೋಧ ಹಣಮಂತಪ್ಪನಿಗೆ ಅಂತಿಮ ಗೌರವ. 
ಜಿಲ್ಲೆ

ಖಜ್ಜಿಡೋಣಿ ಯೋಧ ಹಣಮಂತಪ್ಪ ಪಂಚಭೂತಗಳಲ್ಲಿ ಲೀನ

ಕಲಾದಗಿ: ಕಳೆದ ಶನಿವಾರದಂದು ಅನಾರೋಗ್ಯದಿಂದ ದೂರದ ರಾಜಸ್ಥಾನದ ಜೋಧ್‌ಪುರದಲ್ಲಿ ಸಾವಿಗೀಡಾಗಿದ್ದ ಸಮೀಪದ ಖಜ್ಜಿಡೋಣಿಯ ವೀರ ಯುವಯೋಧ ಹಣಮಂತಪ್ಪ ಬಸಪ್ಪ ತಳವಾರ ಅವರ ಅಂತಿಮಸಂಸ್ಕಾರ ಸೋಮವಾರ ರಾತ್ರಿ ಊರವರ, ದೇಶಾಭಿಮಾನಿಗಳ, ಮಾಜಿ ಯೋಧರ ಹಾಗು ಸರ್ಕಾರಿ ಗೌರವದೊಂದಿಗೆ ನೆರವೇರಿತು.

ರಾತ್ರಿ 9.30 ರ ಹೊತ್ತಿಗೆ ಗ್ರಾಮಕ್ಕಾಗಮಿಸಿದ ಪಾರ್ಥಿವಶರೀರವನ್ನು ಗ್ರಾಮದ ತಾಯಮ್ಮ ದೇವಿ ದೇವಸ್ಥಾನದ ಪಕ್ಕದಲ್ಲಿರುವ ಸ್ಥಳದಲ್ಲಿ ಅಂತಿಮದರ್ಶನಕ್ಕೆ ಇಡುವುದರೊಂದಿಗೆ ಜನಪ್ರತಿನಿಗಳಿಗೆ,ಅಕಾರಿಗಳಿಗೆ,ಮಾಜಿ ಸೈನಕರಿಗೆ,ಸಂಬಂಕರಿಗೆ ಅಂತಿಮಗೌರ ಸಲ್ಲಿಸಲು ಅವಕಾಶಮಾಡಿಕೊಡಲಾಗಿತ್ತು.

ಯೋಧನಿಗೆ ಅಂತಿಮಗೌರವ:ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪುರ,ಜಿಲ್ಲಾಕಾರಿ ಜಾನಕಿ ಕೆ.ಎಮ್.ಜಿಪಂ ಸಿಇಓ ಶಶಿಧರ ಕುರೇರ,ತಹಶೀಲ್ದಾರ ಅಮರೇಶ ಪಮ್ಮಾರ ಮುಂತಾದವರು ಹಾಗು ಬಾಗಲಕೋಟೆ,ಮುಧೋಳ,ರಾಮದುರ್ಗಗಳಿಂದ ಆಗಮಿಸಿದ್ದ ಮಾಜಿ ಸೈನಿಕರ ಸಂಘದ ಪದಾಕಾರಿಗಳು ಹಾಗೂ ಬೈಕ್ ರ‌್ಯಾಲಿಯ ಮೂಲಕ ಲೋಕಾಪುರದಿಂದ ಆಗಮಿಸಿ ದೇಶಭಕ್ತರ ತಂಡದವರು ಯೋಧ ಹಣಮಂತಪ್ಪ ಅವರ ಪಾರ್ಥಿಶರೀರದ ಬಳಿ ಹೂಗುಚ್ಛವನ್ನು ಇಟ್ಟು ಅಂತಿಮಗೌರವ ಸಲ್ಲಿಸಿದರು.

ಕೊನೆಯದಾಗಿ ಮತ ಯೊಧ ಹಣಮಂತಪ್ಪ ಅವರ ಇಳಿವಯಸ್ಸಿನ ತಾಯಿ,ಪತ್ನಿ,ಪುಟ್ಟ ಕಂದಮ್ಮಗಳಿಬ್ಬರು ಹಾಗು ಸಹೋದರರು ಅಂತಿಮ ಗೌರವಸಲ್ಲಿಸುವಾಗ ಅವರೆಲ್ಲರ ದುಖಃದ ಕಟ್ಟೆ ಒಡೆದಿತ್ತು.ಜೊತೆಗೆ ನೆರವದವರ ಕಣ್ಣಾಲಿಗಳು ತುಂಬಿದ್ದವು.

ಅಚ್ಚುಕಟ್ಟಾದ ವ್ಯವಸ್ಥೆ:ಹಣಮಂತಪ್ಪ ಅವರ ಅಂತಿಮದರ್ಶನಕ್ಕೆ ಗ್ರಾಮದ ಗ್ರಾಮಪಂಚಾಯತನಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು.ಮಾಜಿ ಸೈನಿಕರ ಪಡೆ ಶಿಸ್ತುಬದ್ದವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.ಕಾರ್ಯಕ್ರಮ,ಮೆರವಣಿಗೆಯಲ್ಲಿ ನಿರಂತರವಾಗಿ‘ ಹಣಮಂತಪ್ಪ ಅಮರ ಹೇ,ಭಾರತ ಮಾತಾಕಿ ಜೈ’ಮುಂತಾದ ಘೋಷಣೆಗಳು ಕೇಳಿಬಂದವು.ಪಾರ್ಥಿವ ಶರೀರ ಆಗಮಿಸಿದ ಹಾಗು ರುದ್ರಭೂಮಿಯತ್ತ ಸಾಗಿದ ಮಾರ್ಗದುದ್ದಕ್ಕೂ ರಂಗೋಲಿ ಬಿಡಿಸಿ,ಪಟಾಕ್ಷಿ ಸಿಡಿಸಲಾಯಿತು.

ಈ ಸಂಧರ್ಭದಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಇನ್ನಿತರರು ಸೈನಿಕರ ಬಗ್ಗೆ,ಅವರ ತ್ಯಾಗ ಬಲಿದಾನದ ಬಗ್ಗೆ ಹಾಗು ಮತ ಯೋಧ ಹಣಮಂತಪ್ಪನ ಬಗ್ಗೆ ಮಾತನಾಡಿದರು.ನುಡಿನಮನವನ್ನು ಸಲ್ಲಿಸಿದರು.

ತಮ್ಮ ಕುಟುಂಬವನ್ನು ತೊರೆದು ದೂರದೆಲ್ಲೊ ಇರುವ ಕಠಿಣ ಪ್ರದೇಶದಲ್ಲಿ ದೇಶಕಾಯುವ ಯೋಧರ ತ್ಯಾಗ ಹಾಗೂ ಬಲಿದಾನವನ್ನು ನಿಜಕ್ಕೂ ನಾವು ಸದಾ ನೆನೆಪಿಸಿಕೊಳ್ಳಬೇಕು.ಇಂದು ನಿಧನರಾಗಿರುವ ವೀರ ಯೋಧ ಹಣಮಂತಪ್ಪ ಅವರಂಥವರಿಂದ ನಾವಿಂದು ಸುರಕ್ಷಿತವಾಗಿದ್ದೆವೆ.ಇಂಥಹ ವೀರ ಯೋಧರು ಸದಾ ಅಮರರು.ಭಗವಂತ ಅವರಾತ್ಮಕ್ಕೆ ಶಾಂತಿಯನ್ನು ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲಿ.
-ಸಚಿವ ಆರ್.ಬಿ.ತಿಮ್ಮಾಪುರ