ಜಿಲ್ಲೆ

ಮನೆಗೆ ಹೊರಟ ಶಿಕ್ಷಕಿಯ ಕೊರಳಿಗೆ ಕೈ ಹಾಕಿದ ಖದೀಮರು, ಚೈನ್ ಎಗರಿಸಿದರೂ

ಮುಂಡಗೋಡ: ಶಾಲೆಯಿಂದ ಮನೆಗೆ ತೆರಳುತ್ತಿರುವಾಗ ಶಿಕ್ಷಕಿಯೊಬ್ಬರ ಕೊರಳಲ್ಲಿದ್ದ ಬಂಗಾರದ ಚೈನ್ ಕದ್ದುಕೊಂಡ ಹೋದ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರೋಜಾ ದೇವಾಡಿಗ ಎಂಬುವರು ಶಾಲೆ ಮುಗಿಸಿಕೊಂಡು ಮನೆಯತ್ತ ಹೊರಟಿದ್ದರು.

ಈ ವೇಳೆ ಪಟ್ಟಣದ ಹೊಸ ಓಣಿಯ ಹಾಸ್ಟೆಲ್ ಕ್ರಾಸ್ ಸನಿಹ ಸ್ಕೂಟಿಯಲ್ಲಿ ಬಂದ ಇಬ್ಬರು ಕಳ್ಳರು ಶಿಕ್ಷಕಿಯ ಕೊರಳಲ್ಲಿದ್ದ ಎರಡು ತೊಲೆಯ ಬಂಗಾರದ ಚೈನ್ ಅನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.