ಜಿಲ್ಲೆ

ಶ್ರೀಗಂಧದ ಮರ ಕತ್ತರಿಸಿಕೊಂಡು ಹೋದ ಖದೀಮರು

Gadag - Desk - Tippanna Avadoot

ಮುಂಡಗೋಡ: ತಾಲೂಕಿನಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳ ಪತ್ತೆ ಅರಣ್ಯ ಇಲಾಖೆಗೆ ಸವಾಲಾಗಿದೆ.
ಪಟ್ಟಣದ ದೇಶಪಾಂಡೆ ನಗರದ ಮಹಮ್ಮದ್ ಹಜರತ್ ಎಂಬುವರ ತೋಟದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡಿದ್ದಾರೆ.


ಮಹಮ್ಮದ್ ಅವರು, 3-4 ದಿನಗಳಿಂದ ಬೇರೆ ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಇದನ್ನು ಗಮನಿಸಿದ ಮರಗಳ್ಳರು 10 ವರ್ಷದ ಎರಡು ಶ್ರೀಗಂಧದ ಮರಗಳನ್ನು ಯಂತ್ರದಿಂದ ಕತ್ತರಿಸಿಕೊಂಡು ಹೋಗಿದ್ದಾರೆ. ಗುರುವಾರ ಮಹಮ್ಮದ್ ಅವರು ತೋಟಕ್ಕೆ ಹೋಗಿ ನೋಡಿದಾಗ ಮರ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.