ಜಿಲ್ಲೆ

ಗೌರವಾಧ್ಯಕ್ಷರಾಗಿ ಕೆ.ಎಚ್​.ನಾಯಕ ಆಯ್ಕೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಕೆ.ಎಚ್​.ನಾಯಕ, ಅಧ್ಯಕ್ಷರಾಗಿ ಜಯಶ್ರೀ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು ಎಂದು ಅಖಂಡ ಧಾರವಾಡ ಚುಟುಕು ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಶಂಕರ ಕುಂಬಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಚಿನ್ಮಯಿ ಪಾಟೀಲ ಮತ್ತು ಶ್ರೀನಿವಾಸ ಪಾಟೀಲ, ಪ್ರಧಾನ ಕಾರ್ಯದರ್ಶಿ ಉಷಾ ಗದ್ದಗಿಮಠ, ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಜಕ್ಕಣ್ಣವರ, ಸಹ ಕಾರ್ಯದರ್ಶಿ ಡಾ. ಸುಧಾ ಹುಲಗೂರ, ಕೋಶಾಧ್ಯಕ್ಷರಾಗಿ ಕಸ್ತೂರಿ ಬೀರಪ್ಪನವರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ.ಕೆ.ಹೊಂಗಲ, ನಿಂಗಣ್ಣ ಕುಂಟಿ, ಆರ್​.ಪಿ.ಕುಲಕರ್ಣಿ, ಪಂಪಾಪತಿ ಹಿರೇಮಠ, ಪ್ರಮೋದ ಜೋಶಿ, ಮಧುಮತಿ ಸಣಕಲ್ಲ, ಮಾಯಾ ಚಿಕ್ಕೇರೂರು, ಜ್ಯೋತಿ ದೊಡ್ಡಲಿಂಗಣ್ಣರ, ಸುಮಾ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.