ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ಜಿಮ್ಾನಾ ಅಸೋಸಿಯೇಷನ್ ಆಯೋಜಿಸಿರುವ 3ನೇ ಆವೃತ್ತಿಯ ಕರ್ನಾಟಕ ಜಿಮ್ಾನಾ ಪ್ರೀಮಿಯರ್ ಲೀಗ್ (ಕೆಜಿಪಿಎಲ್) ಬ್ಯಾಡ್ಮಿಂಟನ್ ಟೂರ್ನಾಮೆಂಟ್ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಕರ್ನಾಟಕ ಜಿಮ್ಾನಾ ಕ್ಲಬ್ನ ಚೇರಮನ್ ಎಚ್.ಎನ್. ನಂದಕುಮಾರ ಮಾತನಾಡಿ, ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ ಅಂಗವಾಗಿ ಸಂಸ್ಥೆಯು ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಆಯೋಜಿಸುವ ಮೂಲಕ ಕ್ರೀಡಾಭಿಮಾನಿಗಳ ಮನೋಸ್ಥೈರ್ಯ ಹೆಚ್ಚಿಸಿದೆ ಎಂದರು.
ಉಪಾಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ಕ್ರೀಡೆ ಎಂಬುದು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಿದೆ. ಇಂದಿನ ಒತ್ತಡ ಭರಿತ ಜೀವನದಲ್ಲಿ ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಕ್ರೀಡಾಮನೋಭಾವನೆ ಬೆಳೆಸಿಕೊಳ್ಳಬೇಕಲ್ಲದೇ ಅತ್ಯುತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ವೀರಣ್ಣ ಸವಡಿ, ಒಟ್ಟು ನಾಲ್ಕು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಬ್ಯಾಡ್ಮಿಂಟನ್ನಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿರುವ ಆಟಗಾರರು ಈ ಬಾರಿಯ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದರಿಂದ ಟೂರ್ನಾಮೆಂಟ್ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ಹೇಳಿದರು.
ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ನ ಎಂಡಿ ವೀರೇಶ ಉಂಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ನಾನು ಕ್ರೀಡೆಯ ಬಗ್ಗೆ ಅತೀವ ಉತ್ಸುಕತೆ ಹೊಂದಿದ್ದೇನೆ. ಉತ್ತರ ಕರ್ನಾಟಕದ ಕ್ರೀಡಾ ಪ್ರೇಮಿಗಳಿಗೆ ಅನುಕೂಲವಾಗಲೆಂದೆ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸುವ ಮೂಲಕ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡಲು ಪ್ರಯತ್ನಿಸುತ್ತಿರುವೆ ಎಂದರು.
ಉದಯ ಬಾಡಕರ್, ಸಂಕಲ್ಪ ಶೆಟ್ಟರ್, ಸಮುಂದ್ರಸಿಂಗ್, ವಿನೋದ ಬತ್ತದ ಮತ್ತಿತರರು ಉಪಸ್ಥಿತರಿದ್ದರು.