ಹುಬ್ಬಳ್ಳಿ: ಕರ್ನಾಟಕ ಜಿಮ್ಾನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಕೆಜಿಪಿಎಲ್)ನ ಫೈನಲ್ನಲ್ಲಿ ಆ. 19ರಂದು ಡಾ. ಅಪೂರ್ವ ಪಾಟೀಲ ಮತ್ತು ಡಾ. ಶೃತಿ ತೆಗ್ಗಿನಮನಿ ಮಾಲೀಕತ್ವದ ವಿವ ವಿಕ್ಟರ್ಸ್ ಮತ್ತು ಬಸವರಾಜ ಉಳ್ಳಾಗಡ್ಡಿಮಠ ಮಾಲೀಕತ್ವದ 8 ಪಿಎಮ್ ಕಿಂಗ್ಸ್ ತಂಡಗಳು ಸೆಣಸಲಿವೆ.
ಹುಬ್ಬಳ್ಳಿಯ ಕರ್ನಾಟಕ ಜಿಮ್ಾನ ಅಸೋಸಿಯೇಶನ್ ನಡೆಸುತ್ತಿರುವ ಈ ಪಂದ್ಯಾವಳಿಯ ಫೈನಲ್ ಪಂದ್ಯ ಸಂಜೆ 5ಗಂಟೆಗೆ ಹಾಗೂ ಸಮಾರೋಪ ಸಮಾರಂಭ ರಾತ್ರಿ 8ಗಂಟೆಗೆ ದೇಶಪಾಂಡೆ ನಗರದಲ್ಲಿನ ಕೆಜಿಎ ಮೈದಾನದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಉದ್ಯಮಿ ಸತೀಶ (ಬಾಬು) ಶೆಟ್ಟಿ ಪಾಲ್ಗೊಳ್ಳುವರು.