ಕೊಳ್ಳೇಗಾಲ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವ ಜನಿಕ ಕುಂದು ಕೊರತೆ ದೂರು ಅರ್ಜಿ ಸ್ವೀಕರಿಸಿದರು. ಲೋಕಾಯುಕ್ತ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಮ್ಯಾಥ್ಯೂಸ್ ಥಾಮಸ್ ಸಾರ್ವಜನಿಕರಿಂದ 11 ಅರ್ಜಿ ಸ್ವೀಕಾರ ಮಾಡಿ ಮಾತನಾಡಿ, ಜನರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸಲಿದೆ ಎಂದರು.
ಕೊಂಗರಹಳ್ಳಿ ಗ್ರಾಮದ ದಿವಾಕರ್ ಎಂಬುವರು ಮಾತನಾಡಿ, ನನ್ನ ಹೆಂಡತಿ ನಿಧನದ ಬಳಿಕ ಆಕೆಯ ಹೆಸರಿನಲ್ಲಿದ್ದ 2 ಮನೆಗಳನ್ನು ನನ್ನ ಮತ್ತು ನನ್ನ 2 ಹೆಣ್ಣು ಮಕ್ಕಳ ಗಮನಕ್ಕೆ ಬಾರದಂತೆ ನನ್ನ ಮಗ ಅಕ್ರಮವಾಗಿ ಇ-ಸ್ವತ್ತು ಮಾಡಿಕೊಂಡಿದ್ದಾನೆ. ಈ ಬಗ್ಗೆ ಕ್ರಮವಹಿಸುವಂತೆ ಜಿ.ಪಂ. ಸಿಇಒ, ತಾಪಂ ಇಒಗೆ ದೂರು ನೀಡಿದ್ದೆ. ಇದುವರೆಗೂ ಕ್ರಮ ವಹಿಸಿಲ್ಲ. ಜ.10 ರಂದು ಲೋಕಾಯುಕ್ತ ಅಧಿಕಾರಿಗಳಿಗೂ ಅರ್ಜಿ ಸಲ್ಲಿಸಿದ್ದೆ. ಲೋಕಾಯುಕ್ತ ಅಧಿಕಾರಿಗಳು ಕೊಂಗರಹಳ್ಳಿ ಗ್ರಾಪಂ ಪಿಡಿಒಗೆ ಸೂಕ್ತ ಕ್ರಮಕೈಗೊಂಡು ಹಿಂಬರಹ ನೀಡುವಂತೆ ಸೂಚನೆ ನೀಡಿದ್ದರು. ಆದರೆ, ಇದುವರೆಗೂ ಪಿಡಿಒ ಕ್ರಮ ವಹಿಸಿಲ್ಲ. ನನಗೆ ನನ್ನ ಮಗನಿಂದ ಅನ್ಯಾಯವಾಗಿದೆ ಎಂದು ದೂರು ಅರ್ಜಿ ಸಲ್ಲಿಸಿದರು. ಸ್ಥಳದಲ್ಲಿದ್ದ ಕೊಂಗರಹಳ್ಳಿ ಪಿಡಿಒ ಅವರಿಗೆ ಈ ದೂರು ವಿಚಾರಣೆ ಸಂಬಂಧ ಕ್ರಮ ಕೈಗೊಳ್ಳುವಂತೆ ಮ್ಯಾಥ್ಯೂಸ್ ಥಾಮಸ್ ಸೂಚನೆ ನೀಡಿದರು.
ಕೊ