ಜಿಲ್ಲೆ

ಸಿದ್ದಯ್ಯನಪುರದ ಮನೆಯಲ್ಲಿ ನಗ, ನಾಣ್ಯ ಭಸ್ಮ

ಎ. ಆರ್. ರಘುರಾಮ
  • ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನ ಪುರ ಗ್ರಾಮದ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ
    ನಗ, ನಾಣ್ಯ ಮತ್ತು ಪರಿಕರಗಳು ಸುಟ್ಟು ಭಸ್ಮವಾಗಿವೆ.
    ಗ್ರಾಮದ ಮಾಲತಿ ಎಂಬುವರ ಮನೆಯಲ್ಲಿ ಶುಕ್ರವಾರ ಬೆಂಕಿ ಅವಘಡ ನಡೆದಿದೆ. ಮಾಲತಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಕಪಾಟಿನಲ್ಲಿದ್ದ 2 ಲಕ್ಷ ರೂ. ನಗದು, 30 ಗ್ರಾಂ. ತೂಕದ ಚಿನ್ನಾಭರಣ ಹಾಗೂ ರೇಷ್ಮೆ ಸೀರೆಗಳು, ಮನೆ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.