ಕೊಳ್ಳೇಗಾಲ : ಬಾಕಿ ಉಳಿದಿರುವ ಕಾಮಗಾರಿಯನ್ನು ಕೆಆರ್‌ಐಡಿಎಲ್ ಅಧಿಕಾರಿಗಳು ತ್ವರಿತವಾಗಿ ಪೂರ್ಣ ಗೊಳಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ ನೀಡಿದರು. ನವೆಂಬರ್ 26ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳ ಪರಿಶೀಲಿಸಿ ಮಾತನಾಡಿದರು. ಭವನದ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಆಗಬೇಕಿದ್ದ ಕೆಲಸಗಳ ಬಗ್ಗೆ ಕೆಆರ್‌ಐಡಿಎಸ್ ಇಂಜಿನಿಯರ್ಸ್ ಹಾಗೂ ಸಂಘದ ಪದಾಧಿಕಾರಿಗಳಿಂದ ಮಾಹಿತಿ ಪಡೆದರು.
ಸಂಘದ ಸದಸ್ಯರು ನ.26ಕ್ಕೆ ಭವನ ಉದ್ಘಾಟನೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು. ಅದಕ್ಕೆ ನಾನೂ ಒಪ್ಪಿದ್ದೇನೆ. ಈ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್ ಅಧಿಕಾರಿಗಳು 1 ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸಿಕೊಡಬೇಕು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ, ಸಂಸದ ಸುನೀಲ್ ಬೋಸ್ ಸೇರಿದಂತೆ ಗಣ್ಯರನ್ನು ಆಹ್ವಾನಿಸಿ ಉದ್ಘಾಟಿಸೋಣ ಎಂದು ಭರವಸೆ ನೀಡಿದರು.
ನನೆಗುದ್ದಿಗೆ ಬಿದ್ದಿದೆ: ಭೀಮನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ ಮಾತನಾಡಿ, 18 ವರ್ಷಗಳಿಂದ ಭವನ ಕಾಮಗಾರಿ ನನೆಗುದ್ದಿಗೆ ಬಿದ್ದಿದೆ.ಡೋರ್ ಪಾಲಿಶ್, ಪೇಟಿಂಗ್, ವಿದ್ಯುತ್ ದೀಪಗಳು, ಸೀಲಿಂಗ್, ಅಡುಗೆ ಮನೆಗೆ ಗ್ಯಾಸ್ ಲೈನ್ ಸಂಪರ್ಕ, ನೀರಿನ ಸಂಪರ್ಕ ಇನ್ನಿತರ ಕೆಲಸಗಳು ಆಗಬೇಕಿದೆ ಶಾಸಕರ ಗಮನ ಸೆಳೆದರು. ನಗರಸಭೆ ಸದಸ್ಯ ರಾಘವೇಂದ್ರ, ಸಂಘದ ಪದಾಧಿಕಾರಿಗಳಾದ ಕಿರಣ್, ಪಾಪಣ್ಣ, ಶಶಿಧರ್ ಮತ್ತಿತರಿದ್ದರು.