ಜಿಲ್ಲೆ

ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ 'ವಯಲೆನ್ಸ್​'!

ಬೆಳಗಾವಿ: ಅದ್ಧೂರಿಯಾಗಿ ನಿರ್ಮಾಣಗೊಂಡು ಭರ್ಜರಿಯಾಗಿ ಬಿಡುಗಡೆಯಾಗಿ ಅದ್ಭುತವಾದ ಆರಂಭ ಕಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕೆಜಿಎಫ್​- ಚಾಪ್ಟರ್​ 2 ಸಿನಿಮಾದ ಹವಾ ಮದುವೆ ಆಮಂತ್ರಣಕ್ಕೂ ವ್ಯಾಪಿಸಿದ್ದು, ಅಲ್ಲಿಯೂ 'ವಯಲೆನ್ಸ್' ಕಂಡುಬಂದಿದೆ.

ವಿಜಯ್ ಕಿರಗಂದೂರು ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನ, ಯಶ್​, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್​ ದತ್, ಪ್ರಕಾಶ್ ರಾಜ್​ ಮುಂತಾದವರ ಅಭಿನಯದಲ್ಲಿ ಮೂಡಿ ಬಂದಿರುವ ಕೆಜಿಎಫ್​ ಚಾಪ್ಟರ್ 2 ಭರ್ಜರಿಯಾಗೇ ಪ್ರದರ್ಶನ ಕಾಣುತ್ತಿದೆ.

ಈ ಸಿನಿಮಾದಲ್ಲಿ ‘ವಯಲೆನ್ಸ್ ವಯಲೆನ್ಸ್ ವಯಲೆನ್ಸ್.. ಐ ಡೋಂಟ್ ಲೈಕ್​ ಇಟ್, ಐ ಅವಾಯ್ಡ್​.. ಬಟ್ ವಯಲೆನ್ಸ್ ಲೈಕ್ಸ್ ಮೀ, ಐ ಕಾಂಟ್ ಅವಾಯ್ಡ್​..’ ಎಂದು ಯಶ್ ಹೇಳುವ ಡೈಲಾಗ್ ವೈರಲ್ ಆಗಿದ್ದು, ಸಿನಿಪ್ರಿಯರ ಬಾಯಲ್ಲೂ ನಲಿದಾಡುತ್ತಿದೆ.

ಇದೀಗ ಈ ವಯಲೆನ್ಸ್ ಮದುವೆ ಆಮಂತ್ರಣಕ್ಕೂ ವ್ಯಾಪಿಸಿದೆ. ಅಂದರೆ, ಮದುವೆಯ ಕರೆಯೋಲೆಯಲ್ಲೂ ವಯಲೆನ್ಸ್​ ಸ್ಟೈಲ್​ನಲ್ಲೇ ಸಾಲುಗಳನ್ನು ಬರೆಯಲಾಗಿದೆ. ಬೆಳಗಾವಿಯ ಶ್ವೇತಾ-ಚಂದ್ರಶೇಖರ್ ಎಂಬ ವಧು-ವರರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಯಲೆನ್ಸ್​ ಶೈಲಿಯ ಸಾಲುಗಳಿವೆ.

ಮ್ಯಾರೇಜ್​, ಮ್ಯಾರೇಜ್, ಮ್ಯಾರೇಜ್..
ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್​;
ಬಟ್ ಮೈ ರಿಲೇಟಿವ್ಸ್ ಲೈಕ್ ಮ್ಯಾರೇಜ್,
ಐ ಕಾಂಟ್ ಅವಾಯ್ಡ್​..
ಎಂಬುದಾಗಿ ಬರೆಯಲಾಗಿದೆ.

ಇವರ ಮದುವೆ ಮೇ 13ರಂದು ಬೆಳಗಾವಿಯ ರಂಭಾಪುರಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ.

ಮದುವೆ ಆಮಂತ್ರಣ