ಜಿಲ್ಲೆ

ಇದ್ದೂ ಇಲ್ಲದಂತಿದೆ ಸಂತೆ ಮಾರುಕಟ್ಟೆ

ಟಿ.ಎನ್. ಜಗದೀಶ್ ಚನ್ನಗಿರಿ

ಚನ್ನಗಿರಿಯಲ್ಲಿ ವ್ಯವಸ್ಥಿತವಾದ ಸಂತೆ ಮಾರುಕಟ್ಟೆ ನಿರ್ವಣಗೊಂಡರೂ ಪುರಸಭೆ ಅಧಿಕಾರಿಗಳು ಅಲ್ಲಿ ಸಂತೆ ಮಾಡಲು ಅವಕಾಶ ನೀಡದ ಕಾರಣ ಅದು ವಾಹನಗಳ ನಿಲುಗಡೆಗೆ, ಹರಟೆಕಟ್ಟೆಗೆ, ಅನೈತಿಕ ಚಟುವಟಿಕಗಳಿಗೆ ತಾಣವಾಗಿದೆ.

ಈ ಹಿಂದೆ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ವಾರದ ಸಂತೆ, ಕುರಿ ಸಂತೆಗೆ ಅನುಕೂಲವಾಗುವಂತೆ ಎಪಿಎಂಸಿ ಅನುದಾನದಡಿ 2021ರಲ್ಲಿ 2.50 ಕೋಟಿ ರೂ. ಮಂಜೂರು ಮಾಡಿಸಿ ಮಾರುಕಟ್ಟೆ ನಿರ್ವಿುಸಿದ್ದರು.

ಆ ಹಂತದಲ್ಲಿ ಅಧಿಕಾರಿಗಳ ಸಭೆ ನಡೆಸಿ 160 ವರ್ತಕರು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿದ್ದರು. ಪೂರಕವಾಗಿ ಕುಡಿಯುವ ನೀರು, ಶೌಚಗೃಹ, ದ್ವಿಚಕ್ರ ವಾಹನಗಳ ನಿಲುಗಡೆಗೆ ನುವು ಮಾಡಿಕೊಟ್ಟಿದ್ದರು.

ಹಲವು ವರ್ಷಗಳಿಂದ ಗುಡಾರದಲ್ಲಿ ವ್ಯಾಪಾರ ಮಾಡುತ್ತ ಬಂದಿರುವ ವ್ಯವಹಾರಸ್ಥರು ಮಾರುಕಟ್ಟೆಗೆ ಹೋಗಿ ಕುಳಿತರೆ ಬಾಡಿಗೆ ಕಟ್ಟಬೇಕು ಹಾಗೂ ಹರಾಜಿನಲ್ಲಿ ಭಾಗವಹಿಸಿ ಹಣ ಪಾವತಿಸಬೇಕಾಗುತ್ತದೆ ಎಂಬ ಭಯದಿಂದ ಬಿಡಾರದಲ್ಲೇ ವ್ಯಾಪಾರ ಮುಂದುವರಿಸಿದ್ದಾರೆ.

ಹೀಗಾಗಿ ಹೊಸ ಸಂತೆ ಮಾರುಕಟ್ಟೆಗೆ ಜನರು ಹೋಗದೆ ಕುರಿ ವ್ಯಾಪಾರಿಗಳು ತಮಗಾಗಿ ಮಾಡಿರುವ ವ್ಯಾಪಾರದ ಸ್ಥಳ ಬಿಟ್ಟು ಮಾರುಕಟ್ಟೆ ಸೇರಿಕೊಂಡಿದ್ದಾರೆ. ವಾರದಲ್ಲಿ ಕುರಿಗಳ ವ್ಯಾಪಾರ ನಡೆಯುವುದರಿಂದ ತ್ಯಾಜ್ಯ ವಸ್ತುವಿನಿಂದ ಕೆಟ್ಟ ವಾಸನೆ ಬೀರುತ್ತಿದೆ. ಪ್ರಸ್ತುತ ಮಾರುಕಟ್ಟೆ ಸ್ವಚ್ಚತೆ ಇಲ್ಲದೆ ಸುತ್ತಮುತ್ತಲಿನ ಜನರ ವಾಸ ಮಾಡುವುದು ಕಷ್ಟವಾಗಿದೆ. ಕುರಿಸಂತೆ ನಡೆಯುವ ಸ್ಥಳ ವಾಹನ ರ್ಪಾಂಗ್ ಜಾಗ ಆಗಿದೆ.

ಪ್ರತಿ ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ನಡೆಯುವ ಸಂತೆಗೆ ದಾವಣಗೆರೆ, ಭದ್ರಾವತಿ, ಹೊಳೆಲ್ಕೆರೆ, ಹೊಳೆಹೊನ್ನೂರು, ಅಜ್ಜಂಪುರ ಸೇರಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗ್ಗೆಯಿಂದ ಸಂಜೆವರೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ.

ಸರಕಳ್ಳತನ, ಹಣ, ಮೊಬೈಲ್ ಇತರೆ ಕಳ್ಳತನ ನಡೆಯುವ ಕಾರಣ ಸಂತೆಗೆ ಹೋಗುವಾಗ ಮಹಿಳೆಯರು ಧರಿಸಿದ ಆಭರಣ ಮತ್ತು ಮೊಬೈಲ್​ಗಳನ್ನು ಮನೆಯಲ್ಲಿ ಬಿಟ್ಟುಹೋಗುತ್ತಾರೆ.

ಸಂತೆಗೆ ಬರುವ ಆಟೋ, ಟಿಪ್ಪರ್ ಹಾಗೂ ಟಾಟಾ ಎಸಿ ವಾಹನಗಳು ಎಲ್ಲಿ ಬೇಕಲ್ಲಿ ನಿಲುಗಡೆ ಮಾಡಿದರೆ ಓಡಾಟಕ್ಕೆ ತೊಂದರೆಯಾಗುತ್ತದೆ.

ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅನೇಕ ಬಾರಿ ಹೇಳಿದ್ದರೂ ಅಲ್ಲಿಗೆ ಹೋದರೆ ವ್ಯಾಪಾರವಾಗುವುದಿಲ್ಲ ಎಂಬ ಕಾರಣಕ್ಕೆ ಬಿಡಾರದಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾಹನ ಚಾಲಕರಿಗೆ ಸಂತೆ ಒಳಗೆ ಪ್ರವೇಶವಿಲ್ಲ ಅಕ್ರಮವಾಗಿ ಹೋಗುತ್ತಾರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ. | ಕೃಷ. ಡಿ. ಕಟ್ಟಿಮನಿ, ಮುಖ್ಯಾಧಿಕಾರಿ ಪುರಸಭೆ . ಎಪಿಎಂಸಿ ಅನುದಾನದಡಿ ಸಂತೆ ಮಾರುಕಟ್ಟೆ ನಿರ್ವಿುಸಿ ತಹಸೀಲ್ದಾರ್ ಪಟ್ಟರಾಜ ಗೌಡ ಇದ್ದಂಥ ವೇಳೆ 2023ರಲ್ಲಿ ಪುರಸಭೆಗೆ ಹಸ್ತಾಂತರಿಸಲಾಗಿದೆ. ಮುಂದಿನ ಕ್ರಮವನ್ನು ಪುರಸಭೆಯವರು ತೆಗೆದುಕೊಳ್ಳಬೇಕು ನಮ್ಮ ಇಲಾಖೆ ನಿರ್ಮಾಣ ಮಾಡಿಕೊಡುವುದಾಗಿದೆ. | ಎಸ್. ಸೋಮಶೇಖರ್, ಕಾರ್ಯದರ್ಶಿ ಎಪಿಎಂಸಿ ಚನ್ನಗಿರಿ. ವಾರದ ಸಂತೆಯಲ್ಲಿ ಗುಣಮಟ್ಟದ ತಾಜಾ ತರಕಾರಿ ಸಿಗುತ್ತದೆ ಮತ್ತು ಕಡಿಮೆ ಬೆಲೆ ಇರುತ್ತದೆ ಎಂದು ಸಂತೆಗೆ ಹೋಗುತ್ತೇವೆ. ಆದರೆ ಸಂತೆಯಲ್ಲಿ ನಡೆಯುವ ಕಳ್ಳತನ ಪ್ರಕರಣದಿಂದ ಒಬ್ಬರೇ ಹೋಗಲು ಭಯವಾಗುತ್ತದೆ. ಅಲ್ಲದೆ ಹೋಗುವ ದಾರಿಯಲ್ಲಿ ವಾಹನ ಮತ್ತು ಆಟೋ ನಿಲ್ಲಿಸಿರುತ್ತಾರೆ ಇದರಿಂದ ಹೋಗಿ ಬರುವುದು ಕಷ್ಟವಾಗುತ್ತದೆ. | ರೂಪಾ, ಗೃಹಿಣಿ ಚನ್ನಗಿರಿ ಶಾಸಕನಾಗಿದ್ದಾಗ ಸಾರ್ವಜನಿಕರು ಕಚೇರಿಗೆ ಬಂದು ಸಂತೆ ಮಾರುಕಟ್ಟೆ ನಿರ್ವಿುಸಿಕೊಡುವಂತೆ ಒತ್ತಡ ಹಾಕಿದ್ದರಿಂದ ಜನರ ಅನುಕೂಲಕ್ಕೆ ಎಪಿಎಂಸಿ ಅನುದಾನದಡಿ ಮಾರುಕಟ್ಟೆ ನಿರ್ವಿುಸಿಕೊಟ್ಟಿದ್ದೇನೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅದರ ಸದ್ಬಳಕೆ ಮಾಡಿಕೊಂಡು ಹೋಗಬೇಕು. |ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕರು ಚನ್ನಗಿರಿ.