ಸಾಸ್ವೆಹಳ್ಳಿ: ಹೋಬಳಿಯಲ್ಲಿ ಶುಕ್ರವಾರ ಯುಗಾದಿ ಹಾಗೂ ರಂಜಾನ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೊನ್ನಾಳಿ ತಾಲೂಕು ರಕ್ಷಣಾ ಇಲಾಖೆ ಸಿಬ್ಬಂದಿ ಹಾಗೂ ಕೇಂದ್ರ ಮೀಸಲು ಪಡೆಯ ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್ಎಎಫ್) ನಿಂದ ರೂಟ್ ಮಾರ್ಚ್ ನಡೆಯಿತು.
ಈ ವೇಳೆ ಹೊನ್ನಾಳಿ ಸಬ್ ಇನ್ಸ್ಪೆಕ್ಟರ್ ಎನ್. ಕುಮಾರ್ ಮಾತನಾಡಿ, ಧಾರ್ವಿುಕ ಆಚರಣೆಗಳು ಗ್ರಾಮದಲ್ಲಿ ಸೌಹಾರ್ದದಿಂದ ಶಾಂತಿಯುತವಾಗಿ ಆಚರಣೆಯಾಗಲಿ, ಪ್ರತಿ ಗ್ರಾಮದಲ್ಲೂ ಕೋಮು ಸೌಹಾರ್ದ ನೆಲೆಸಿ, ದ್ವೇಷ ನಶಿಸಿ ಬಾಂಧವ್ಯ ಬೆಳೆಯಲಿ ಎಂದರು.
ರೂಟ್ ಮಾರ್ಚ್ ನೇತೃತ್ವವನ್ನು ಪಿಎಸ್ಐ ಎನ್. ಕುಮಾರ್, ದಾವಣಗೆರೆ ಜಿಲ್ಲಾ ಡಿಎಆರ್ ತುಕಡಿಯ ಲೋಕೇಶ್, ಪೊಲೀಸ್ ದಫೇದಾರ್ ದೊಡ್ಡಬಸಪ್ಪ, ಪೇದೆಗಳಾದ ಪ್ರಸನ್ನಕುಮಾರ್, ಮಂಜುನಾಥ್ ವಹಿಸಿದ್ದರು.