ಬೆಂಗಳೂರು: ಕೇವಿನ್ ಕೇರ್ಸ್ ಕಂಪನಿಯು ಚಿಕ್, ನೈಲ್, ರಾಗ ಎಂಬ ಹೆಸರಿನಡಿ ಹ್ಯಾಂಡ್ ಸ್ಯಾನಿಟೈಜರ್ಸ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕರೊನಾ ಆತಂಕದಿಂದ ಹ್ಯಾಂಡ್ ಸ್ಯಾನಿಟೈಜರ್ಸ್ಗಳಿಗೆ ಬೇಡಿಕೆ ಹೆಚ್ಚಿದ್ದು, ನಕಲಿ ಸ್ಯಾನಿಟೈಜರ್ಸ್ ದಂಧೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಕ್ವಾಲಿಟಿ ಸ್ಯಾನಿಟೈಜರ್ಸ್ ನೀಡಿ ಗ್ರಾಹಕರ ಆರೋಗ್ಯ ಕಾಪಾಡಲು ಕಂಪನಿ ಮುಂದಾಗಿದೆ. ಕೇವಲ 1 ರೂ.ಗೆ 2 ಎಂ.ಎಲ್.ನ ಸ್ಯಾನಿಟೈಜರ್ಸ್ ಗ್ರಾಹಕರಿಗೆ ದೊರೆಯಲಿದೆ. ಇದನ್ನು ಗ್ರಾಹಕರು ಎರಡು ಬಾರಿ ಬಳಕೆ ಮಾಡಬಹುದಾಗಿದೆ.
ರಾಷ್ಟ್ರವ್ಯಾಪ್ತಿ ಎಲ್ಲ ಕಿರಾಣಿ ಅಂಗಡಿಗಳಲ್ಲೂ ಈ ಸ್ಯಾನಿಟೈಜರ್ಸ್ ಗಳು ವಿವಿಧ ಫ್ಲೇವರ್ಸ್ಗಳಲ್ಲಿ ದೊರೆಯಲಿದೆ. ಸಣ್ಣ ಪುಟ್ಟ ಎಂಎಲ್ಗಳ ಬಾಟಲಿಯ ಜತಗೆ 5 ಲೀಟರ್ ಕಂಟೇನರ್ಗಳಲ್ಲೂ ಇದು ಲಭ್ಯವಿದೆ. ‘ನಾವು ಲಾಭಗಳಿಸುವ ಆಸೆಯಿಂದ ಸ್ಯಾನಿಟೈಜರ್ಸ್ಗಳನ್ನು ಉತ್ಪಾದಿಸಿಲ್ಲ. ಬದಲಾಗಿ ಕರೊನಾದಿಂದ ಜನರನ್ನು ಮುಕ್ತ ಮಾಡಲು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಸಿಗಲಿ ಎಂಬ ಮನೋಭಾವದಿಂದ ಸ್ಯಾನಿಟೈಜರ್ಸ್ಗಳನ್ನು ಬಿಡುಗಡೆ ಮಾಡಿದ್ದೇವೆಂದು’ ಕೇವಿನ್ ಕೇರ್ಸ್ ಪ್ರೖೆ.ಲಿ.ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸಿ.ಕೆ. ರಂಗನಾಥನ್ ತಿಳಿಸಿದ್ದಾರೆ. ಉತ್ಪನ್ನದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 1800 419 0671 ಸಂರ್ಪಸಬಹುದು.