ಬೈಲಹೊಂಗಲ: ಸಮಾಜದಲ್ಲಿ ಆದರ್ಶ ಎನಿಸಿಕೊಂಡ ಶಿವಶರಣ ಮೇದಾರ ಕೇತಯ್ಯ ತತ್ತ$$$್ವದಡಿ ಸಾಗಿ ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದು ಶ್ರೀ ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯ ಗುರುಪುತ್ರಪ್ಪ ಹೊಸಮನಿ ಹೇಳಿದರು. ಪಟ್ಟಣದ ಆನಿಗೋಳ ರಸ್ತೆಯ ಶಿವಶರಣ ಮೇದಾರ ಕೇತಯ್ಯ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಯಂತಿ ಉತ್ಸವದಲ್ಲಿ ಮಾತನಾಡಿ, ಜಗತ್ತಿಗೆ ಉತ್ತಮ ಸಂದೇಶ ಕೊಟ್ಟಂತಹ ಶರಣರ ಆದರ್ಶ ಯುವ ಜನಾಂಗ ಅಳವಡಿಸಿಕೊಳ್ಳಲಿ ಎಂದರು. ಪುರಸಭೆ ಮಾಜಿ ಅಧ್ಯ ಬಾಬು ಕುಡಸೋಮಣ್ಣವರ, ಶಂಕರೆಪ್ಪ ಯಡಳ್ಳಿ, ಸುರೇಶ ಹೊಸಮನಿ, ಬಸವರಾಜ ಬೆಟಗೇರಿ, ಶಂಕರ ಮುನವಳ್ಳಿ, ನಾಗೇಶ ಬೆಟಗೇರಿ, ಬಾಬುಸಾಬ್ ಸುತಗಟ್ಟಿ, ವಿಜಯ ಹುಣಶೀಕಟ್ಟಿ, ಶಿವಾನಂದ ಹುಬ್ಬಳ್ಳಿ, ಪುಟ್ಟು ಬೆಟಗೇರಿ, ಬಸವರಾಜ ಹೊಂಗಲ, ಶೇಖರ ಹುಣಶೀಕಟ್ಟಿ, ಮಡಿವಾಳಿ ಹುಣಶೀಕಟ್ಟಿ, ಪ್ರಕಾಶ ಬೆಟಗೇರಿ, ನಿಜಲಿಂಗ ಬೆಟಗೇರಿ, ಸುಭಾಸ ಮೇದಾರ, ಶಿವಪ್ಪ ಬೆಟಗೇರಿ, ಬಾಬು ಹುಣಶೀಕಟ್ಟಿ, ಗದಿಗಯ್ಯ ರುದ್ರಾಮಠ ಇತರರಿದ್ದರು.