ಧಾರವಾಡ: ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ಮುಕ್ತ ಶೂಟಿಂಗ್ ಚಾಂಪಿಯನಶಿಪ್- ೨೦೨೪ರ ಪ್ಯಾರಾ ಶೂಟಿಂಗ್ ಸ್ಪರ್ಧೆಯಲ್ಲಿ ನಗರದ ಕೇಶವ ತೆಲಗು ೧೦ ಮೀಟರ್ ಏರ್ ಪಿಸ್ತೂಲ್(ಎನ್‌ಆರ್) ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಲ್ಲೆಗೆ ಕೀರ್ತಿ ತಂದ ಕೇಶವ ಅವರನ್ನು ತರಬೇತುದಾರ ರವಿಚಂದ್ರ ಬಾಳೆಹೊಸೂರು, ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಅಧ್ಯಕ್ಷ ಎಂ. ಮಹಾದೇವ, ಕಾರ್ಯದರ್ಶಿ ಎಂ.ಆರ್. ಮಹೇಶಗೌಡ, ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ ನಿರ್ದೇಶಕ ಶಿವಾನಂದ ಬಾಳೆಹೊಸೂರ, ಮಾಜಿ ಸೈನಿಕ ಅಶೋಕ ಶಿವಳ್ಳಿ ಅಭಿನಂದಿಸಿದ್ದಾರೆ