ಕಾರ್ಕಳ: ಗ್ರಾಮೀಣ ಕ್ರೀಡೆಗಳ ಪರಿಚಯದ ಜತೆಯಲ್ಲಿ ಈ ನೆಲದ ಮಣ್ಣ ಗುಣವನ್ನು ಯುವಪೀಳಿಗೆಗೆ ತಿಳಿಸುವ ಕಾರ್ಯ ಕೆಸರುಗದ್ದೆ ಕ್ರೀಡೆಗಳು ಮಾಡುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ.ಗೋಪಾಲ ಮುಗೇರಾಯ ಹೇಳಿದರು.
ಮುಂಡ್ಕೂರಿನ ಸೇವಾ ಭಾರತಿ, ಮುದ್ದಾಣು ಮಹಾಲಿಂಗೇಶ್ವರ ಫ್ರೆಂಡ್ಸ್, ಮಡ್ಮಣ್ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಫ್ರೆಂಡ್ಸ್ ನೇತೃತ್ವದಲ್ಲಿ ಇನ್ನಾ, ಮುಂಡ್ಕೂರು, ಮುಲ್ಲಡ್ಕ ಗ್ರಾಮದ ಬಂಧುಗಳಿಗಾಗಿ ಇನ್ನದಗುತ್ತಿನ ಎದುರಿನ ಗದ್ದೆಯಲ್ಲಿ ಭಾನುವಾರ ಕೆಸರ‌್ಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇನ್ನದ ಗುತ್ತಿನಾರ್ ಶಂಕರ ಶೆಟ್ಟಿ, ಬಗ್ಗರಗುತ್ತಿನಾರ್ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಂಬಳ ಕ್ಷೇತ್ರದ ಮಹಿಳಾ ಸಾಧಕಿ ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ, ಮುಂಡ್ಕೂರು ಸತ್ಯನಾರಾಯಣ ಭಟ್, ಇನ್ನಾ ರಾಜಾ ಭಟ್, ಇನ್ನಾ ಬಂಟರ ಸಂಘ ಅಧ್ಯಕ್ಷ ಉಕ್ಕುಡ ಅರುಣ್ ಶೆಟ್ಟಿ, ನಾನಿಲ್ತಾರ್ ಕುಲಾಲ ಸಂಘ ಅಧ್ಯಕ್ಷ ಜಯರಾಮ ಕುಲಾಲ್, ಉದ್ಯಮಿ ಪ್ರಕಾಶ್ ಶೆಟ್ಟಿ, ಮಡ್ಮಣ್ ಪಡುಮನೆ ಗಣೇಶ್ ಮಾಡ, ಪೊಲ್ಲೆದ ಮಜಲು ಚಂದ್ರಹಾಸ ಶೆಟ್ಟಿ, ಪಡ್ಡಣಗುತ್ತು ಪ್ರವೀಣ್ ಶೆಟ್ಟಿ, ಕಸ್ತೂರಿ ಗಣೇಶ್ ಶೆಟ್ಟಿ, ಮುಂಡ್ಕೂರು ಮಾಣಿಬೆಟ್ಟು ಶೇಖರ ಶೆಟ್ಟಿ ಮತ್ತಿತರರಿದ್ದರು. ಇನ್ನಾ ಉದಯ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ನಿತೇಶ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸೌಮ್ಯಾ ಶೆಟ್ಟಿ, ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ, ಸತೀಶ್ ಹೊಸ್ಮಾರು ಕ್ರೀಡಾಕೂಟ ನಿರೂಪಿಸಿದರು.