ಜಿಲ್ಲೆ

ಇದಪ್ಪಾ ಅದೃಷ್ಟ! ಫೇಸ್​ಬುಕ್​ ಫ್ರೆಂಡ್ ಭೇಟಿಗೆ ಕೇರಳಕ್ಕೆ ಹೋದ ಮಂಡ್ಯ ಯುವಕ ರಾತ್ರೋರಾತ್ರಿ ಕೋಟ್ಯಧಿಪತಿ

ಮಂಡ್ಯ: ಅದೃಷ್ಟವೆಂಬುದು ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ಒಮ್ಮೆ ಅದೃಷ್ಟ ದೇವತೆ ಮನೆ ಪ್ರವೇಶಿಸಿದರೆ ಸಾಕು ಆತನ ಬದುಕೇ ಬಂಗಾರವಾಗಿಬಿಡುತ್ತದೆ ಎಂಬುದಕ್ಕೆ ಸಕ್ಕರೆ ನಾಡಿನಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಕೇರಳದ ಲಾಟರಿ ಮಂಡ್ಯದ ಯುವಕನನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ. ಫೇಸ್​ಬುಕ್​ ಫ್ರೆಂಡ್ ಭೇಟಿ ಮಾಡಲು ಹೋದ ಮಂಡ್ಯ ಯುವಕನಿಗೆ ಅದೃಷ್ಟ ದೇವತೆಯೇ ಒಲಿದಿದ್ದಾಳೆ. ಮಂಡ್ಯ ಮದ್ದೂರು ತಾಲೂಕಿನ ಯುವಕನಿಗೆ ಕೇರಳದ ಲಾಟರಿಯಲ್ಲಿ ಕೋಟಿ ರೂಪಾಯಿ ಬಂಪರ್ ಬಹುಮಾನ ಬಂದಿದೆ.

ಮದ್ದೂರಿನ ಸೋಮನಹಳ್ಳಿಯ ಉದ್ಯಮಿ ಪುತ್ರ ಸೋಹನ್ ಬಲರಾಮ್​ಗೆ ಕೇರಳದ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದೆ. ಕೇರಳದ ಪುಥನಾಥಿಯಲ್ಲಿನ ಅಂಗಡಿಯಲ್ಲಿ ಖರೀದಿಸಿದ್ದ ಭಾಗ್ಯಧರ ಲಾಟರಿಗೆ ಕೋಟಿ ರೂ. ಬಹುಮಾನ ಬಂದಿದೆ.

ಫೇಸ್ಬುಕ್ ಫ್ರೆಂಡ್ ಭೇಟಿ ಮಾಡಲು ಶನಿವಾರ ಕೇರಳದ ಪುಥನಾಥಣಿಗೆ ತೆರಳಿದ್ದ ಸೋಹನ್ ಬಲರಾಮ್, ವಾಪಸ್ಸು ಬರುವಾಗ 100 ರೂ. ಕೊಟ್ಟು ಸ್ನೇಹಿತರ ಒತ್ತಾಯದ ಮೇರೆಗೆ ಲಾಟರಿ ಕೊಂಡಿದ್ದ. ಇದೀಗ ಸೋಹನ್​ ಕೊಂಡಿದ್ದ ಲಾಟರಿ ಸಂಖ್ಯೆಗೆ ಕೋಟಿ ರೂಪಾಯಿ ಬಂಪರ್ ಬಹುಮಾನ ಬಂದಿದ್ದು, ಸೋಹನ್ ಬಲರಾಂ ಕುಟುಂಬ ಫುಲ್​ ಖುಷಿಯಾಗಿದೆ. (ದಿಗ್ವಿಜಯ ನ್ಯೂಸ್​)