ರಮೇಶ್ ಶೆಟ್ಟಿ ಬಾಯಾರ್ ಅವರಿಗೆ ಪೋಕ್ ಲೋರ್ ಅಕಾಡೆಮಿ ಪುರಸ್ಕಾರವನ್ನು ಸಚಿವ ಸಜಿ ಚೆರಿಯಾನ್ ಪ್ರದಾನ ಮಾಡಿದರು. 
ಜಿಲ್ಲೆ

ರಮೇಶ್ ಶೆಟ್ಟಿ ಬಾಯಾರ್‌ಗೆ ಪುರಸ್ಕಾರ

ಸೌಮ್ಯ ಆರ್

ಬದಿಯಡ್ಕ: ಕೇರಳ ಸರ್ಕಾರದ ಪೋಕ್ ಲೋರ್ ಅಕಾಡೆಮಿ(ಜಾನಪದ ಅಕಾಡೆಮಿ)ಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ತಿರುವನಂತಪುರದ ಕೊಟ್ಟಾರಕುನ್ನು ನಿಶಾಗಂಧಿ ಆಡಿಟೋರಿಯಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಬಾಯಾರ್ ಅವರಿಗೆಪೋಕ್ ಲೋರ್ ಅಕಾಡೆಮಿ ಪ್ರಶಸ್ತಿಯನ್ನು ರಾಜ್ಯ ಸಂಸ್ಕೃತಿ ಇಲಾಖೆ ಸಚಿವ ಸಜಿ ಚೆರಿಯಾನ್ ಅವರು ನೀಡಿ ಗೌರವಿಸಿದರು.

ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆ ನಿವಾಸಿ ರಮೇಶ್ ಶೆಟ್ಟಿ ಅವರ ಕಂಸ, ಶಿಶುಪಾಲ, ರಾವಣ, ಕೌರವ ಮೊದಲಾದ ಪಾತ್ರಗಳು ಜನಮನಸೂರೆಗೊಂಡಿವೆ.