ಜಿಲ್ಲೆ

ಕೆರಗೋಡಿನಲ್ಲಿ ಹನುಮ ಧ್ವಜ ಪ್ರಕರಣ: ನಿಮ್ಮ ವಿರುದ್ಧ ರೌಡಿಶೀಟ್ ಏಕೆ ತೆಗೆಯಬಾರದೆಂದು ಪ್ರತಿಭಟನಾಕಾರರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮಾತ್ರವಲ್ಲದೆ ರೌಡಿಶೀಟರ್ ತೆರೆಯುವ ಸಂಬಂಧ ಏಳು ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ರೌಡಿ ಶೀಟರ್ ತೆರೆಯುವ ಬಗ್ಗೆ ಮೂವರೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರಿಗೆ ಕೆರಗೋಡು ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ಧ್ವಜ ಸ್ಥಂಭ ವಿಚಾರದಲ್ಲಿ ಅನ್ಯ ಕೋಮಿನ ಜನರನ್ನ ಬೆದರಿಸಿ ನಿಂದನೆ ಮಾಡುವುದು, ಹೆದರಿಸುವುದು, ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಚೋದನೆಗೆ ಒಳಪಡಿಸುತ್ತಿದ್ದೀರಿ. ಮಾತ್ರವಲ್ಲದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವುದರಿಂದ ನಿಮ್ಮ ವಿರುದ್ಧ ರೌಡಿಶೀಟರ್ ತೆರೆಯಬಾರದು. ಈ ಸಂಬಂಧ ನೋಟಿಸ್ ತಲುಪಿದ ಏಳು ದಿನದೊಳಗೆ ಠಾಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಮೇ.4ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.